Advertisement

ಶೇ. 20 ವಿದ್ಯಾರ್ಥಿಗಳಿಂದ ವಿದ್ಯಾಭ್ಯಾಸಕ್ಕೆ ತಿಲಾಂಜಲಿ!

07:22 AM Aug 03, 2021 | Team Udayavani |

ಬೆಂಗಳೂರು: ಕೊರೊನಾ ಹಾವಳಿಯಿಂದ ಉಂಟಾದ ದುಃಸ್ಥಿತಿ, ಕುಟುಂಬದ ಆರ್ಥಿಕ ಸಂಕಷ್ಟದಿಂದ ರಾಜ್ಯಾದ್ಯಂತ ಸುಮಾರು ಶೇ. 20ರಷ್ಟು ವಿದ್ಯಾರ್ಥಿಗಳು 2019-2020ರಿಂದ ಈಚೆಗೆ ಪದವಿ ಶಿಕ್ಷಣವನ್ನು ಅರ್ಧಕ್ಕೆ ಮೊಟಕು ಗೊಳಿಸಿ ಉದ್ಯೋಗ ಮಾಡುತ್ತಿದ್ದಾರೆ.

Advertisement

ಕೊರೊನಾದಿಂದ ತರಗತಿಗಳು ಸರಿಯಾಗಿ ನಡೆ ಯುತ್ತಿಲ್ಲ. ಓದು ಮುಂದುವರಿಸಿರುವ ಹಲವರು ಆನ್‌ಲೈನ್‌ ತರಗತಿಗಳಲ್ಲೂ ಪಾಲ್ಗೊಳ್ಳುತ್ತಿಲ್ಲ, ನೇರ ತರಗತಿಗೂ ಹೋಗುತ್ತಿಲ್ಲ. ಬದಲಾಗಿ ಈ ಅವಧಿಯಲ್ಲಿ ಸಣ್ಣಪುಟ್ಟ ಉದ್ಯೋಗ ಮಾಡುತ್ತಿದ್ದಾರೆ. ಹಲವರು ನರೇಗಾ ಉದ್ಯೋಗ ಚೀಟಿ ಮಾಡಿಸಿ ಕೊಂಡಿದ್ದಾರೆ. ನಗರಗಳಲ್ಲಿ ಆನ್‌ಲೈನ್‌ ಡೆಲಿವರಿ ಮತ್ತಿತರ ತಾತ್ಕಾಲಿಕ ಉದ್ಯೋಗ ಮಾಡುತ್ತಿದ್ದಾರೆ.

ಇಂಥ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಪುನಃ ಕಾಲೇಜಿಗೆ ಮರಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಅನೇಕ ವಿದ್ಯಾರ್ಥಿಗಳು ಪರೀಕ್ಷೆ ಶುಲ್ಕ ಪಾವತಿಸುತ್ತಿದ್ದಾರೆ. ಆದರೆ ಕಾಲೇಜಿಗೆ ಬರುತ್ತಿಲ್ಲ. ಆನ್‌ಲೈನ್‌ ತರಗತಿಯಲ್ಲೂ ಇವರ ಹಾಜರಾತಿ ಇಲ್ಲ. ಇವರನ್ನು ಪತ್ತೆ ಮಾಡುವುದು ಕಷ್ಟಕರ ಎಂದು ಕಾಲೇಜು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ವಿವರ ನೀಡಿದ್ದಾರೆ.

ಶೇ. 40ರಷ್ಟು ಹಾಜರಾತಿ:

Advertisement

ನಾಲ್ಕೈದು ವಿ.ವಿ. ಬಿಟ್ಟರೆ ಉಳಿದ ಎಲ್ಲ ವಿ.ವಿ.ಗಳಲ್ಲಿ ತರಗತಿ ನಡೆಯು ತ್ತಿದೆ. ಸರಾಸರಿ ಶೇ. 40ರಷ್ಟು ಹಾಜ ರಾತಿ ಇದೆ. ಪ್ರವೇಶ ಪ್ರಕ್ರಿಯೆ ಪೂರ್ಣ ಗೊಂಡ ಬಳಿಕ ಎಷ್ಟು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮೊಟಕುಗೊಳಿಸಿದ್ದಾರೆ ಎಂಬ ಸ್ಪಷ್ಟ ಮಾಹಿತಿ ಸಿಗಲಿದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕ ಪ್ರೊ| ಎಸ್‌. ಮಲ್ಲೇಶ್ವರಪ್ಪ  ಮಾಹಿತಿ ನೀಡಿದ್ದಾರೆ.

ಶೇ. 80ರಷ್ಟು ಹಾಜರಾತಿ ಇದ್ದು,  ಶೇ. 20ರಷ್ಟು ವಿದ್ಯಾರ್ಥಿಗಳು ತರಗತಿ ಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಅವರು ವಿದ್ಯಾ ಭ್ಯಾಸ ಮೊಟಕುಗೊಳಿಸಿರುವ ಸಾಧ್ಯತೆ ಇದೆ. -ಪ್ರೊ| ಶ್ರೀನಿವಾಸ ಬಳ್ಳಿ,  ನೃಪತುಂಗ ವಿ.ವಿ. ಕುಲಪತಿ

 

-  ರಾಜು ಖಾರ್ವಿ ಕೊಡೇರಿ

 

Advertisement

Udayavani is now on Telegram. Click here to join our channel and stay updated with the latest news.

Next