Advertisement

20 ಎಂಎಲ್‌ಡಿಗೆ ಜಾಕ್‌ವೆಲ್‌ ಮೇಲ್ದರ್ಜೆ ಕಾರ್ಯ 3 ತಿಂಗಳಲ್ಲಿ ಪೂರ್ಣ: ಮೇಯರ್‌

12:09 PM Mar 23, 2022 | Team Udayavani |

ತುಂಬೆ: ನಗರಕ್ಕೆ 24 ಗಂಟೆಗಳ ನೀರು ಪೂರೈಕೆಯ ದೃಷ್ಟಿಯಿಂದ ಅಮೃತ್‌ ಯೋಜನೆಯ ಮೂಲಕ ತುಂಬೆಯ 10 ಎಂಎಲ್‌ಡಿ ಜಾಕ್‌ವೆಲ್‌ ಅನ್ನು 20 ಎಂಎಲ್‌ಡಿಗೆ ಮೇಲ್ದರ್ಜೆಗೇರಿಸುವ ಕಾಮಗಾರಿ 3 ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಜತೆಗೆ ವಿತರಣಾ ಜಾಲವನ್ನು ಅಭಿವೃದ್ಧಿ ಪಡಿಸುವ ಸುಮಾರು 800 ಕೋ. ರೂ.ಗಳ ಜಲಸಿರಿ ಯೋಜನೆಯೂ ಪ್ರಗತಿಯಲ್ಲಿದೆ ಎಂದು ಮೇಯರ್‌ ಪ್ರೇಮಾನಂದ ಶೆಟ್ಟಿ ಹೇಳಿದರು.

Advertisement

ಅವರು ಮಂಗಳವಾರ ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ಡ್ಯಾಂನಲ್ಲಿ ನೇತ್ರಾವತಿ ನದಿಗೆ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದ ಬಳಿಕ ಮಾತನಾಡಿದರು. ಅಮೃತ್‌ ಯೋಜನೆಯಲ್ಲಿ ಪಂಪುಸೆಟ್‌ ಸೇರಿದಂತೆ ಇತರ ಸಲಕರಣೆಗಳು ಕೂಡ ಬದಲಾವಣೆಯಾಗಲಿದೆ. ಮುಂದಿನ ದಿನಗಳಲ್ಲಿ 10 ಎಂಎಲ್‌ಡಿ ನೀರು ಹೆಚ್ಚುವರಿಯಾಗಿ ಲಭ್ಯವಾಗಲಿದ್ದು, ನಗರದ ಜತೆಗೆ ಇತರ ಪ್ರದೇಶಗಳಿಗೂ ನೀರು ಪೂರೈಕೆಗೆ ಅನುಕೂಲವಾಗಲಿದೆ. ಜಲಸಿರಿಯಲ್ಲಿ ಟ್ಯಾಂಕ್‌ಗಳ ನಿರ್ಮಾಣದ ಜತೆಗೆ 81.7 ಎಂಎಲ್‌ ಡಿಯ ನೀರು ಶುದ್ಧೀಕರಣ ಘಟಕ ನಿರ್ಮಾಣಗೊಳ್ಳಲಿದೆ ಎಂದರು.

ಕಿಯೋನಿಕ್ಸ್‌ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮಾತನಾಡಿದರು. ಉಪಮೇಯರ್‌ ಸುಮಂಗಲಾ, ವಿವಿಧ ಸ್ಥಾಯೀ ಸಮಿತಿಗಳ ಅಧ್ಯಕ್ಷರಾದ ಲೋಕೇಶ್‌ ಬೊಳ್ಳಾಜೆ, ಶೋಭಾ ರಾಜೇಶ್‌, ಸಂದೀಪ್‌ ಗರೋಡಿ, ಲೀಲಾವತಿ ಪ್ರಕಾಶ್‌, ಮುಖ್ಯಸಚೇತಕ ಸುಧೀರ್‌ ಶೆಟ್ಟಿ ಕಣ್ಣೂರು, ಮಾಜಿ ಮೇಯರ್‌ಗಳಾದ ಎಂ.ಶಶಿಧರ್‌ ಹೆಗ್ಡೆ, ಭಾಸ್ಕರ್‌ ಕೆ., ದಿವಾಕರ್‌ ಪಾಂಡೇಶ್ವರ, ಕಾರ್ಪೊರೇಟರ್‌ಗಳಾದ ಕಿಶೋರ್‌ ಕೊಟ್ಟಾರಿ, ಜಗದೀಶ್‌ ಶೆಟ್ಟಿ, ಶಕೀಲ ಕಾವ, ಕದ್ರಿ ಮನೋಹರ್‌ ಶೆಟ್ಟಿ, ಚಂದ್ರವಾತಿ ವಿಶ್ವನಾಥ್‌, ವೀಣಾಮಂಗಳ, ಗಣೇಶ್‌ ಕುಲಾಲ್‌, ಕಿರಣ್‌ ಕೋಡಿಕಲ್‌, ಮನೋಜ್‌ ಕುಮಾರ್‌, ರಂಜಿನಿ ಕೋಟ್ಯಾನ್‌, ರೂಪಾಶ್ರೀ ಪೂಜಾರಿ, ಜಯಶ್ರೀ ಕುಡ್ವ, ಮನಪಾ ಆಯುಕ್ತ ಅಕ್ಷಯ್‌ ಶ್ರೀಧರ್‌, ಪ್ರವೀಣ್‌ ತುಂಬೆ, ಗಣೇಶನ್‌ ಆರ್‌, ರವಿಶಂಕರ್‌, ಸುರೇಶ್‌, ಗುರುಪ್ರಸಾದ್‌ ಮೊದಲಾದವರಿದ್ದರು. ರಾಜೇಶ್‌ ಸುವರ್ಣ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next