Advertisement
ಸುಮಾರು 80 ಸಾವಿರ ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದ್ದು, ಆರು ಜಿಲ್ಲೆಗಳಲ್ಲಿ ಒಟ್ಟು 470 ನಿರಾಶ್ರಿತ ಶಿಬಿರಗಳನ್ನು ಸ್ಥಾಪಿಸಲಾಗಿದೆ. ನಾಗಪಟ್ಟಣ ಸಹಿತ 22 ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಸೂಚಿಸಲಾಗಿದೆ. ತಿರುವೂರು, ತಂಜಾವೂರು ಹಾಗೂ ಇತರ ಭಾಗಗಳಲ್ಲೂ ವಿಪರೀತ ಮಳೆಯಾಗುತ್ತಿದೆ. ಸುಮಾರು 5 ಸಾವಿರ ಮರಗಳು ಉರುಳಿದ್ದು, 13 ಸಾವಿರ ವಿದ್ಯುತ್ ಕಂಬಗಳು ಜಖಂ ಆಗಿವೆ. 260ಕ್ಕೂ ಹೆಚ್ಚು ವೈದ್ಯಕೀಯ ಕ್ಯಾಂಪ್‌ಗ್ಳನ್ನು ಸ್ಥಾಪಿಸಲಾಗಿದೆ. 400 ಆ್ಯಂಬುಲೆನ್ಸ್‌ಗಳು ಕಾರ್ಯಾಚರಿಸುತ್ತಿವೆ. ಕರಾವಳಿಗೆ ಚಂಡಮಾರುತ ಅಪ್ಪಳಿಸಿದಾಗ 120 ಕಿ.ಮೀ ವೇಗದಲ್ಲಿತ್ತು. ಒಳನಾಡಿಗೆ ಚಂಡಮಾರುತ ಪ್ರವೇಶಿಸುತ್ತಿದ್ದಂತೆ ವೇಗ ಕಡಿಮೆಯಾಗಿದೆ.
ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಿರುವ ಎಲ್ಲ ನೆರವನ್ನೂ ನೀಡುವುದಾಗಿ ತಮಿಳುನಾಡು ಸರಕಾರಕ್ಕೆ ಕೇಂದ್ರ ಸರಕಾರ ಘೋಷಿಸಿದೆ. ಪರಿಹಾರ ಘೋಷಣೆ
ಗಜ ಚಂಡಮಾರುತದಿಂದಾಗಿ ಮೃತ ಪಟ್ಟವರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರವನ್ನು ತಮಿಳುನಾಡು ಸಿಎಂ ಘೋಷಿಸಿದ್ದಾರೆ. ತೀವ್ರವಾಗಿ ಗಾಯ ಗೊಂಡವರಿಗೆ 1 ಲಕ್ಷ ರೂ. ಹಾಗೂ ಸಣ್ಣಪುಟ್ಟ ಗಾಯ ಗಳಾದವರಿಗೆ 25 ಸಾವಿರ ರೂ. ನೀಡುವುದಾಗಿ ಘೋಷಿಸಲಾಗಿದೆ.