Advertisement
ಹೌದು. ಇಂದು ಮೈಸೂರು ವಿಶ್ವವಿದ್ಯಾಲಯದ 101ನೇ ಘಟಿಕೋತ್ಸವದಲ್ಲಿ 20 ಚಿನ್ನದ ಪದಕ ಹಾಗೂ 4 ದತ್ತಿ ಬಹುಮಾನ ಪಡದ ಚೈತ್ರಾ ನಾರಾಯಣ ಹೆಗಡೆ ಅವರ ಸಾಧನೆಯ ಕಥೆ.
Related Articles
Advertisement
ಚೈತ್ರಾ ಅವರ ತಂದೆ ನಾರಾಯಣ ಹೆಗಡೆ ಹಾಗೂ ಅಮ್ಮ ಸುಮಂಗಳಾ ಹೆಗಡೆ ಶಿರಸಿಯಲ್ಲಿ ಅಡಿಕೆ ಕೃಷಿಕರು. ಶಿರಸಿಯಲ್ಲಿ ಪಿಯುಸಿ ಶಿಕ್ಷಣ ಮುಗಿಸಿದ ಚೈತ್ರಾ ಹೆಗಡೆ ನಂತರ ಕಾಲೇಜು ಓದಿಗಾಗಿ ಮೈಸೂರಿಗೆ ಬಂದಿದ್ದರು. ಪಿಜಿಯಲ್ಲಿ ಇದ್ದುಕೊಂಡು ಕಲಿತ ಚೈತ್ರಾ ಹೆಗಡೆ ಇಂದು 20 ಚಿನ್ನದ ಪದಕ ಹಾಗೂ 4 ದತ್ತಿ ಬಹುಮಾನವನ್ನು ಪಡೆದಿದ್ದಾರೆ.
ಇಬ್ಬರಿಗೆ ಗೌರವ ಡಾಕ್ಟರೇಟ್: ಈ ಬಾರಿಯ ಘಟಿಕೋತ್ಸವದಲ್ಲಿ ಇಬ್ಬರು ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಜೀವರಾಸಾಯನ ಶಾಸ್ತ್ರ ವಿಭಾಗದ ಗೌರವ ಪ್ರಾಧ್ಯಾಪಕ ಪದ್ಮಭೂಷಣ ಡಾ. ಗೋವಿಂದರಾಜನ್ ಪದ್ಮನಾಭನ್ ಮತ್ತು ರಾಜ್ಯ ಸರ್ಕಾರದ ವಿಷನ್ ಗ್ರೂಪ್ ಫಾರ್ ಸ್ಟಾರ್ಟ್ಅಪ್ಸ್ ನ ಅಧ್ಯಕ್ಷ ಹಾಗೂ ಆಕ್ಸೆಲ್ ಇಂಡಿಯಾ ಸಂಸ್ಥಾಪಕ ಪಾಲುದಾರ ಪ್ರಶಾಂತ್ ಪ್ರಕಾಶ್ ಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.