Advertisement

ಹಾಸನ ನಗರಸಭೆಗೆ 20 ಕೋಟಿ ವಿಶೇಷ ಅನುದಾನ

02:59 PM Nov 22, 2019 | Team Udayavani |

ಹಾಸನ: ಹಾಸನ ನಗರದ ಸ್ವಚ್ಛತೆ ಸೇರಿದಂತೆ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ರಾಜ್ಯಸರ್ಕಾರ ಹಾಸನ ನಗರಸಭೆಗೆ 20 ಕೋಟಿ ರೂ. ಅನುದಾನ ನೀಡುತ್ತಿದ್ದು, ಅದರಲ್ಲಿ ಯಂತ್ರೋಪಕರಣಗಳ ಖರೀದಿಗೆ 5 ಕೋಟಿ ರೂ. ವೆಚ್ಚ ಮಾಡಲಾಗುವುದು ಎಂದು ಶಾಸಕ ಪ್ರಿತಂ ಜೆ.ಗೌಡ ಹೇಳಿದರು.

Advertisement

ವಿವಿಧ ಯಂತ್ರಗಳ ಖರೀದಿ: ಹಾಸನ ನಗರದ ಕಸ ಸಂಗ್ರಹಣೆ ಹಾಗೂ ಸಾಗಣೆಗೆ ಹೊಸದಾಗಿ ಖರೀದಿಸಿರುವ 24 ಆಟೋ ಟಿಪ್ಪರ್‌ಗಳನ್ನು ಸೇವೆಗೆ ಸಮರ್ಪಿಸಲು ಹಾಸನಾಂಬ ದೇವಾಲಯದ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಾಸನ ನಗರಕ್ಕೆ 20 ಕೋಟಿ ರೂ. ಅನುದಾನದ ಮಂಜೂರಾಗಿದೆ. ಮೊದಲ ಹಂತದಲ್ಲಿ 5 ಕೋಟಿ ರೂ. ಗಳನ್ನು ನಗರಾಭಿವೃದ್ಧಿ ಸಚಿವ ಆರ್‌.ಅಶೋಕ್‌ ಅವರು ಮಂಜೂರು ಮಾಡಿದ್ದು, ಅದರಲ್ಲಿ ಜೆಸಿಬಿ, ಹಿಟಾಚಿ, ಟ್ರ್ಯಾಕ್ಟರ್‌ಗಳ ಖರೀದಿಗೆ ತೀರ್ಮಾನಿಸಲಾಗಿದೆ ಎಂದು ಹೇಳಿದರು.

ನಗರ ಸಭೆಯಿಂದಲೇ ಕಸ ಸಂಗ್ರಹಣೆ: 6 ತಿಂಗಳ ಹಿಂದೆ ಕಸ ವಿಲೇವಾರಿ ಗುತ್ತಿಗೆಯನ್ನು ಖಾಸಗಿಯವರಿಗೆ ನೀಡಲಾಗಿತ್ತು. ಆದರೆ ಆ ವ್ಯವಸ್ಥೆ ಸಮರ್ಪಕವಾಗಿ ಅನುಷ್ಠಾನವಾಗಲಿಲ್ಲ. ಆ ಕಹಿ ಅನುಭವದ ಹಿನ್ನೆಲೆಯಲ್ಲಿ ನಗರಸಭೆಯಿಂದಲೇ ಕಸ ಸಂಗ್ರಹಿಸಿ ಸಾಗಣೆ ಮಾಡುವ ನಿಟ್ಟಿನಲ್ಲಿ ಆಟೋ ಟಿಪ್ಪರ್‌ಗಳನ್ನು ಖರೀದಿಸಲಾಗಿದೆ ಎಂದರು. ಕಸ ವಿಲೇವಾರಿಗೆ ಹಾಸನ ನಗರಸಭೆ ಅಧಿಕಾರಿ ಗಳು, ಸಿಬ್ಬಂದಿ, ಪೌರ ಕಾರ್ಮಿಕರು ಸಮರ್ಥರಿದ್ದಾರೆ. ಸಾರ್ವಜನಿಕರು ಸಹಕಾರ ನೀಡಲಿದ್ದಾರೆ. ಈ ನಿಟ್ಟಿನಲ್ಲಿ ನಗರ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿಯನ್ನು ಇನ್ನಷ್ಠು ಪರಿಣಾಮಕಾರಿಯನ್ನಾಗಿ ಮಾಡಲು 24 ಹೊಸ ಆಟೋ ಟಿಪ್ಪರ್‌ಗಳನ್ನು ಖರೀದಿಸಿ ಸೇವೆಗೆ ಒದಗಿಸಲಾಗಿದೆ. ಇನ್ನು ಮುಂದೆ ಹಾಸನ ನಗರದ ಎಲ್ಲಾ 35 ವಾರ್ಡುಗಳಲ್ಲೂ ಕಸ ಸಂಗ್ರಹಣೆ ಹಾಗೂ ಸಾಗಣೆ ಆಟೋ ಟಿಪ್ಪರ್‌ ಒದಗಿಸಿದಂತಾಗಿದೆ ಎಂದರು.

ಹಾಸನ ನಗರಸಭೆ ಆಯುಕ್ತ ಆರ್‌.ಕೃಷ್ಣಮೂರ್ತಿ ಹಾಗೂ ನಗರಸಭೆ ಸದಸ್ಯರಾದ ಗಿರೀಶ್‌ ಚನ್ನವೀರಪ್ಪ, ಜಿ.ಆರ್‌.ಶ್ರೀನಿವಾಸ್‌, ಚಂದ್ರೇಗೌಡ, ಅಮೀರ್‌ ಜಾನ್‌ ಮತ್ತಿತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ನಗರದ ಸ್ವಚ್ಛತೆಯ ಗುರಿ:  ಹಾಸನ ನಗರವನ್ನು ಇನ್ನಷ್ಟು ಸ್ವಚ್ಛವಾಗಿಡುವುದು ತಮ್ಮ ಗುರಿ. ಕಸ ವಿಲೇವಾರಿ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ಸಲುವಾಗಿ ನಗರಾಭಿವೃದ್ಧಿ ಇಲಾಖೆಯ ಅನು ದಾನದಿಂದ 24 ಆಟೋಗಳನ್ನು ಖರೀದಿಸಿ ಎಲ್ಲಾ ವಾರ್ಡ್‌ಗಳಿಗೆ ನಿಯೋಜಿಸಲಾಗಿದೆ ಎಂದ ಅವರು, ಹಾಸನ ನಗರವನ್ನು ಸುಂದರವಾಗಿಟ್ಟುಕೊಳ್ಳಲು ರಸ್ತೆ, ಚರಂಡಿ, ಯುಜಿಡಿ ಕಾಮಗಾರಿ ಜೊತೆಗೆ ಕಸ ವಿಲೇವಾರಿಮತ್ತು ಸ್ವತ್ಛತೆ ಅವಶ್ಯಕ. ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ ಎಂದು ಶಾಸಕ ಪ್ರೀತಂ ಜೆ. ಗೌಡ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next