Advertisement

ಹೊಸನಗರದಲ್ಲಿ 20 ಸೆಂ.ಮೀ. ಮಳೆ

11:18 PM Aug 04, 2019 | Lakshmi GovindaRaj |

ಬೆಂಗಳೂರು: ಭಾನುವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ರಾಜ್ಯದ ಕರಾವಳಿ ಮತ್ತು ಉತ್ತರ ಒಳನಾಡಿನ ಬಹುತೇಕ ಎಲ್ಲೆಡೆ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಮಳೆಯಾಯಿತು. ಹೊಸನಗರದಲ್ಲಿ ರಾಜ್ಯದಲ್ಲಿಯೇ ಅಧಿಕ 20 ಸೆಂ.ಮೀ.ಮಳೆ ಸುರಿಯಿತು. ಮಂಗಳವಾರ ಮುಂಜಾನೆವರೆಗಿನ ಹವಾಮಾನ ಮುನ್ಸೂಚನೆಯಂತೆ ರಾಜ್ಯದ ಕರಾವಳಿಯ ಬಹುತೇಕ ಎಲ್ಲೆಡೆ, ಒಳನಾಡಿನ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಕಚೇರಿಯ ಪ್ರಕಟಣೆ ತಿಳಿಸಿದೆ.

Advertisement

ಕರಾವಳಿಯಲ್ಲಿ ಕಡಲ್ಕೊರೆತ: ಕರಾವಳಿಯಲ್ಲೂ ಮಳೆ ಆರ್ಭಟ ಜೋರಾಗಿದ್ದು, ವಿವಿಧೆಡೆ ಕಡಲ್ಕೊರೆತ ಮುಂದುವರಿದಿದೆ. ಕದ್ರಾ ಜಲಾಶಯ ಭರ್ತಿಯಾಗಿದ್ದು, ಐದು ಕ್ರಸ್ಟ್‌ಗೇಟ್‌ಗಳ ಮೂಲಕ ನೀರು ಹೊರ ಬಿಡಲಾಗಿದೆ. ಕಾಳಿ ನದಿ ದಡದ ಪಕ್ಕದ ಗ್ರಾಮಗಳಿಗೆ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ. ಕಾರವಾರದ ಪಂಚರಿಶಿವಾಡ ಸೇರಿದಂತೆ ನ್ಯೂಕೆಎಚ್‌ಬಿ ಕಾಲೋನಿ, ದೇವಳಿವಾಡ, ಪದ್ಮನಾಭ ನಗರಗಳು ಜಲಾವೃತವಾಗಿವೆ.

ಮಂಗಳೂರು ಸಮೀಪದ ಪಣಂಬೂರು, ತಣ್ಣೀರುಬಾವಿ ಬೀಚ್‌ಗಳಲ್ಲಿ ಸಮುದ್ರದ ಅಲೆಗಳ ಅಬ್ಬರ ಜೋರಾಗಿದೆ. ಅಪಾಯ ಸಂಭವಿಸದಂತೆ ಲೈಫ್‌ಗಾರ್ಡ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಉಳ್ಳಾಲ, ಸೋಮೇಶ್ವರ ಉಚ್ಚಿಲ, ಚಿತ್ರಾಪುರದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು ಎರಡು ಕುಟುಂಬಗಳನ್ನು ಸ್ಥಳಾಂತಗೊಳಿಸಲಾಗಿದೆ. ಸೋಮೇಶ್ವರ ಉಚ್ಚಿಲದ ಬಟ್ಟಪ್ಪಾಡಿ ಬಳಿ ಅಪಾಯದಲ್ಲಿರುವ ರಸ್ತೆಗೆ ಹಾಕಿರುವ ಕಲ್ಲುಗಳು ಕೊರೆತಕ್ಕೆ ಕುಸಿಯುತ್ತಿವೆ. ನ್ಯೂ ಉಚ್ಚಿಲದಲ್ಲಿ ಕಲ್ಲುಗಳು ಸಮುದ್ರ ಪಾಲಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next