Advertisement
ಪಟ್ಟಣದ ಹುಣಸೂರು ಬೇಗೂರು ಮುಖ್ಯರಸ್ತೆ ಮಾರ್ಗದ ಬದಿಯ ಬಯಲಿನಲ್ಲಿಸುಮಾರು 10 ಕುಟುಂಬಗಳು ನೆರೆಯ ಆಂಧ್ರ ಪ್ರದೇಶದಿಂದ ತಲೆ ಕೂದಲು ವ್ಯಾಪಾರಮಾಡಿಕೊಂಡು ಜೀವನ ನಡೆಸಲು ವಲಸೆ ಬಂದು ಆಶ್ರಯ ಪಡೆದುಕೊಂಡಿದ್ದಾರೆ.
Related Articles
Advertisement
ಶಿಕ್ಷಣದಿಂದ ವಂಚಿತವಾಗಿವೆ ಮಕ್ಕಳು: ಪೋಷಕರೇನೋ ಜೀವನ ನಿರ್ವಹಣೆಗೆಂದುಪ್ರತಿದಿನ ತಾಲೂಕಿನ ವಿವಿಧ ಕಡೆಗಳಿಗೆ ವಲಸೆ ಹೋಗಿ ಕೂದಲು ಖರೀದಿ ವ್ಯಾಪಾರಮಾಡಿಕೊಂಡು ಬಂದರೆ ಪೋಷಕರು ಬರುವ ತನಕ ತಾತ್ಕಾಲಿಕ ಟೆಂಟ್‌ಗಳ ಆವರಣದಲ್ಲಿ ಆಟವಾಡುವ ಪುಟಾಣಿಗಳು ವಿಷಜಂತುಗಳ ಅವಾಸ ಸ್ಥಾನ ಅನಿಸಿಕೊಂಡ ಪೊದೆಗಳು, ಮರದ ಕೊಂಬೆಗಳು ಅನ್ನದೇ ಆಟದಲ್ಲಿಕಾಲ ಹರಣ ಮಾಡುತ್ತಿವೆ. ಇದರಿಂದ ಜೀವಕ್ಕೆ ಸಂಚಕಾರ ಒದಗುವ ಸಾಧ್ಯತೆ ಇದ್ದು, ಕಲಿಯಿಂದಲೂ ವಂಚಿತರಾಗುತ್ತಿದ್ದಾರೆ.
ಗರ್ಭಿಣಿಯರಿಗಿಲ್ಲ ಆರೋಗ್ಯ ತಪಾಸಣೆ : ತಾತ್ಕಾಲಿಕ ಟೆಂಟ್‌ನಲ್ಲಿ ಇಬ್ಬರು ತುಂಬು ಗರ್ಭಿಣಿಯರಿದ್ದು, ಒಬ್ಬರಿಗೆ 7 ತಿಂಗಳು ಮತ್ತೂಬ್ಬರಿಗೆ 4 ತಿಂಗಳಾಗಿದ್ದರೂ ಇಲ್ಲಿಯತನಕ ಯಾವುದೇ ಚುಚ್ಚುಮದ್ದು ಪಡೆದುಕೊಂಡಿಲ್ಲ. ತಪಾಸಣೆಗೂ ಒಳಗಾಗಿಲ್ಲ, ಗರ್ಭಿಣಿಯರ ಆರೋಗ್ಯ ತಪಾಸಣೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಮುಂದಾಗದೇ ಇರುವುದು ವಿಪರ್ಯಾಸವೇ ಸರಿ.
ತಾತ್ಕಾಲಿಕ ಟೆಂಟ್ ಶಾಲೆ ಆರಂಭಿಸಿ:
ವಲಸಿಗರು ಆಂಧ್ರ ಮೂಲದವರಾಗಿರುವುದರಿಂದ ಅವರ ಭಾಷೆ ತೆಲುಗು. ಶಿಕ್ಷಣ ಇಲಾಖೆಮಕ್ಕಳ ಕಲಿಕೆ ದೃಷ್ಟಿಯಿಂದ ತಾತ್ಕಾಲಿಕ ಟೆಂಟ್ ಶಾಲೆ ಆರಂಭಿಸಿ ಅಲ್ಲಿ ತೆಲುಗು ಭಾಷೆ ಅರಿತಿರುವಒಬ್ಬ ಶಿಕ್ಷಕರನ್ನು ನಿಯೋಜನೆಗೊಳಿಸುವುದರಿಂದ ಮಕ್ಕಳ ಕಲಿಕೆಗೂ ಅನುಕೂಲವಾ ಗುವುದರ ಜೊತೆಯಲ್ಲಿ ಮಕ್ಕಳು ಬಯಲಿನ ಪೊದೆಗಳಲ್ಲಿ ಆಟವಾಡುವುದರಿಂದ ಸಂಭವಿಸಬಹುದಾದ ಅಪಾಯ ತಪ್ಪಿಸಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ.
ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಬೇಕೆಂಬ ನಿಯಮ ಕೇವಲ ಕಾನೂನಾಗಿ ಉಳಿದಿದೆ ಅನ್ನುವುದಕ್ಕೆ ಶಿಕ್ಷಣದಿಂದ ವಂಚಿತವಾಗಿರುವ ಅಲೆಮಾರಿ ಮಕ್ಕಳ ನೈಜತೆ ಪ್ರತ್ಯಕ್ಷ ಸಾಕ್ಷಿಯಾಗಿದೆ. 4 ವರ್ಷಗಳಿಂದ ತಾಲೂಕು ಕೇಂದ್ರ ಸ್ಥಾನದ ಒಂದೇ ಕಡೆ ವಲಸಿಗರು ಬೀಡು ಬಿಟ್ಟಿದ್ದರೂ ಆ ಮಕ್ಕಳಿಗೆ ಶಿಕ್ಷಣ ಆರೋಗ್ಯ ನೀಡದೇ ಇರುವುದು ದೌರ್ಭಾಗ್ಯ. ಇನ್ನಾದರೂ ಸಂಬಂಧ ಪಟ್ಟವರು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮುಂದಾಗಲಿ.-ಪಿ.ಸುರೇಶ್, ಹ್ಯಾಂಡ್‌ಪೋಸ್ಟ್
ವಲಸಿಗರ ತಾಣಕ್ಕೆ ಸೋಮವಾರ ಭೇಟಿ ನೀಡಿ ಅಲ್ಲಿನ ಮಕ್ಕಳ ಸಮೀಕ್ಷೆ ನಡೆಸಿ ಮಕ್ಕಳ ಶೈಕ್ಷಣಿಕ ಪ್ರಗತಿಗೆಪೂರಕವಾಗಿ ಸರ್ಕಾರದ ನಿಯಮಾವಳಿಯಂತೆ ಕ್ರಮವಹಿಸಲಾಗುತ್ತದೆ. -ಉದಯಕುಮಾರ್, ತಾಲೂಕು ಕ್ಷೇತ್ರಶಿಕ್ಷಣಾಧಿಕಾರಿ
– ಎಚ್.ಬಿ.ಬಸವರಾಜು.