ಚಳ್ಳಕೆರೆ: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯಚಳ್ಳಕೆರೆ ಶಾಖೆ ವತಿಯಿಂದ ಚಳ್ಳಕೆರೆ ವಿಧಾನಸಭಾ ಕ್ಷೇತ್ರವ್ಯಾಪ್ತಿಯ 20 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾಗ್ರಾಮಗಳಿಗೆ ಕುಡಿಯುವ ನೀರು ಹಾಗೂ ಬೀದಿ ದೀಪದವ್ಯವಸ್ಥೆಗಾಗಿ ಇಲಾಖೆ ವತಿಯಿಂದ ವಿದ್ಯುತ್ ಸರಬರಾಜು ಮಾಡಿದ ಸುಮಾರು 3032 ಕೋಟಿ ರೂ. ಬಿಲ್ ಬಾಕಿ ಇದೆ.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿ ಕಾರಿಗಳಿಗೆಬಿಲ್ ಕೂಡಲೇ ಪಾವತಿ ಮಾಡುವಂತೆ ಸೂಚಿಸಿ ನಿಗಮದನಿಯಮಗಳ ಅನುಸಾರ ನೋಟಿಸ್ ಜಾರಿ ಮಾಡಲಾಗಿದೆಎಂದು ಸಹಾಯಕ ಕಾರ್ಯಪಾಲಕ ಅಭಿಯಂತರ ಎನ್.ಎಸ್. ರಾಜು ತಿಳಿಸಿದರು.ನಗರದ ಬೆಸ್ಕಾಂ ಕಚೇರಿಯ ಸಭಾಂಗಣದಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸಾರ್ವಜನಿಕರ ಹಿತದೃಷ್ಟಿಯಿಂದ ಕುಡಿಯುವ ನೀರಿಗೆತೊಂದರೆಯಾಗದಂತೆ ಗ್ರಾಮದ ಜನರು ಕತ್ತಲಲ್ಲಿತೊಂದರೆಯನ್ನು ಅನುಭವಿಸದೆ ಇರಲಿ ಎಂದು ವಿದ್ಯುತ್‌ಸಂಪರ್ಕವನ್ನು ನೀಡಿಡಲಾಗಿದೆ.
ಇಲಾಖೆಗೆ ಸಂದಾಯಮಾಡಬೇಕಾದ 3032 ಕೋಟಿ ಹಣ ಪಾವತಿಸಿ ಇಲಾಖೆಯಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡುವಂತೆ ಮನವಿಮಾಡಲಾಗಿದೆ. ಸರ್ಕಾರ ಗ್ರಾಮ ಪಂಚಾಯಿತಿಗಳಿಗೆಬೀದಿದೀಪ ಮತ್ತು ಕುಡಿಯುವ ನೀರು ಬಿಲ್ ಪಾವತಿಗೆಹಣ ಬಿಡುಗಡೆಗೊಳಿಸಿದ್ದರೂ ಗ್ರಾಮ ಪಂಚಾಯಿತಿಅಭಿವೈದ್ಧಿ ಅ ಧಿಕಾರಿಗಳು ಮಾತ್ರ ಹಣ ನೀಡಲು ನಿರ್ಲಕ್ಷéವಹಿಸುತ್ತಿದ್ದಾರೆ. ಇಲಾಖೆಯ ಹಿರಿಯಅಧಿ ಕಾರಿಗಳು ಕೂಡಲೇ ಬಾಕಿ ವಸೂಲಾತಿಮಾಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಕಂಪನಿಪ್ರಸ್ತುತ ವಿದ್ಯುತ್ ಖರೀದಿಸಿ ವಿತರಣೆ ಮಾಡುತ್ತಿದ್ದು, ಖಾಸಗಿಕೆಲವು ವಿದ್ಯುತ್ ಕಂಪನಿಗಳಿಗೆ ಬೆಂಗಳೂರು ವಿದ್ಯುತ್‌ಸರಬರಾಜು ಕಂಪನಿಯಿಂದ ಹಣ ಪಾವತಿಸಬೇಕಿದೆ.ಬಾಕಿ ಉಳಿಸಿಕೊಂಡಿರುವುದರಿಂದ ಇಲಾಖೆ ಪ್ರಗತಿಗೆಅಡ್ಡಿಯಾಗಿದೆ. ವಸೂಲಾತಿ ಕ್ರಮವನ್ನು ಬಿಗಿಗೊಳಿಸುವಂತೆಹಿರಿಯ ಅಧಿ ಕಾರಿಗಳು ಸೂಚಿಸಿದ್ದಾರೆಂದರು.
ತಾಲೂಕಿನ ಬೆಳಗೆರೆ-228.48,ಬುಡ್ನಹಟ್ಟಿ-70.24, ಚನ್ನಮ್ಮನಾಗತಿಹಳ್ಳಿ-115.46,ಚೌಳೂರು-298.23, ದೇವರಮರಿಕುಂಟೆ-169.87,ದೊಡ್ಡಚೆಲ್ಲೂರು-124.40, ದೊಡ್ಡೇರಿ-147.18,ಗೋಪನಹಳ್ಳಿ-76.77, ಜಾಜೂರು-120.63,ಮೀರಸಾಬಿಹಳ್ಳಿ-89.13, ನಗರಂಗೆರೆ-145.88,ನನ್ನಿವಾಳ-121.36, ಪಿ.ಮಹದೇವರಪು-96.21,ಪಗಡಲಬಂಡೆ-68.10, ಪರಶುರಾಮಪುರ-320.38,ರಾಮಜೋಗಿಹಳ್ಳಿ-148.53, ಸಾಣೀಕೆರೆ-266.12,ಸಿದ್ದೇಶ್ವರನದುರ್ಗ-155.65, ಸೋಮಗುದ್ದು-134.61,ಟಿ.ಎನ್.ಕೋಟೆ-134.37 ಒಟ್ಟು 3031.59 ಕೋಟಿ ರೂ.ಬಾಕಿ ಇರುವುದಾಗಿ ತಿಳಿಸಿದರು.