Advertisement
ಇದನ್ನೂ ಓದಿ:Mudhol; ಹೃದಯಾಘಾತದಿಂದ ಚುನಾವಣಾ ಕರ್ತವ್ಯನಿರತ ಸಿಬ್ಬಂದಿ ಸಾವು
Related Articles
ಅಮರಾವತಿ: ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ ಸೇರಿ ಬಿಜೆಪಿ ನಾಯಕರು ಮುಸ್ಲಿಂ ಮೀಸಲಾತಿ ಯನ್ನು ವಿರೋಧಿಸುತ್ತಿದ್ದರೆ, ಇತ್ತ ಆಂಧ್ರಪ್ರದೇಶದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಮುಸ್ಲಿಮರ ಶೇ.4 ಮೀಸಲಾತಿಯನ್ನು ಬೆಂಬಲಿಸುವುದಾಗಿ ಎನ್‌ಡಿಎ ಮಿತ್ರಪಕ್ಷದ ಚಂದ್ರಬಾಬು ನಾಯ್ಡು ಹೇಳಿದ್ದಾರೆ.
Advertisement
ಧರ್ಮಾವರಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, “ಮೊದಲಿನಿಂದಲೂ ನಾವು ಮುಸ್ಲಿಂ ಮೀಸಲು ಬೆಂಬಲಿಸುತ್ತಾ ಬಂದಿದ್ದೇವೆ. ಇನ್ನು ಮುಂದೆಯೂ ಅದು ಮುಂದುವರಿಯಲಿದೆ ಎಂದಿದ್ದಾರೆ. ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರು ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಸಮುದಾಯಗಳ ಮೀಸಲಾತಿ ಮುಸ್ಲಿಮರ ಪಾಲಾಗಲು ಬಿಡುವುದಿಲ್ಲ ಎಂದಿದ್ದರು. ಆಂಧ್ರಪ್ರದೇಶದಲ್ಲಿ ಟಿಡಿಪಿ, ಜನಸೇನಾ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿವೆ.