Advertisement

2 ಸಾವಿರ ರೂ. ಮುಖಬೆಲೆಯ ನಕಲಿ ನೋಟು ವಶ

11:42 PM Aug 16, 2019 | Lakshmi GovindaRaj |

ಚಾಮರಾಜನಗರ: ಕಲರ್‌ ಜೆರಾಕ್ಸ್‌ ಮಾಡಿದ ಎರಡು ಸಾವಿರ ಮುಖಬೆಲೆಯ ನಕಲಿ ನೋಟುಗಳನ್ನು ತಾಲೂಕಿನ ಚಿಕ್ಕಹೊಳೆ ಬಳಿ ಶುಕ್ರವಾರ ಸಂಜೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗೂಡ್ಸ್‌ ಆಟೋದಲ್ಲಿ ನಕಲಿ ನೋಟುಗಳನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದರು.

Advertisement

ಚಿಕ್ಕಹೊಳೆ ಜಲಾಶಯದ ಬಳಿ ಗೂಡ್ಸ್‌ ಆಟೋ ತಪಾಸಣೆ ನಡೆಸಿದಾಗ 2 ಸಾವಿರ ಮುಖಬೆಲೆಯ ನಕಲಿ ನೋಟುಗಳು ಪತ್ತೆಯಾದವು. ಇವುಗಳನ್ನು ಪರಿಶೀಲಿಸಿದಾಗ ಎರಡು ಸಾವಿರದ ನೋಟನ್ನು ಬಣ್ಣದ ಜೆರಾಕ್ಸ್‌ ನಲ್ಲಿ ನಕಲಿ ಮಾಡಿರುವುದು ಕಂಡು ಬಂತು. ಪೊಲೀಸರು ನಕಲಿ ನೋಟುಗಳು, ಜೆರಾಕ್ಸ್‌ ಕಾಗದ ಹಾಗೂ ಗೂಡ್ಸ್‌ ಆಟೋವನ್ನು ವಶಪಡಿಸಿಕೊಂಡಿದ್ದಾರೆ. ಗೂಡ್ಸ್‌ ಆಟೋ ಚಾಲಕನನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next