Advertisement

ನೇಕಾರರಿಗೆ 2 ಸಾವಿರ ರೂ. ಆರ್ಥಿಕ ನೆರವು: BSY

01:17 AM Mar 09, 2021 | Team Udayavani |

ರಾಜ್ಯದಲ್ಲಿ ಸಂಕಷ್ಟದಲ್ಲಿರುವ ನೇಕಾರರಿಗೆ ನೆರವು ನೀಡುವ ಉದ್ದೇಶದಿಂದ ಜಾರಿಗೊಳಿಸಿರುವ ನೇಕಾರರ ಸಮ್ಮಾನ್‌ ಯೋಜನೆಯನ್ನು ಮುಂದುವರಿಸಲಾಗುತ್ತದೆ. ಅಲ್ಲದೆ, ಕೈಮಗ್ಗ ನೇಕಾರರಿಗೆ ತಲಾ 2 ಸಾವಿರ ರೂ. ಆರ್ಥಿಕ ನೆರವನ್ನು ಡಿ.ಬಿ.ಟಿ ಮೂಲಕ ನೇರ ವರ್ಗಾವಣೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

Advertisement

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಗುಳೇದಗುಡ್ಡ ನಗರದಲ್ಲಿ ನೇಕಾರರ ಜೀವನೋಪಾಯ ಉತ್ತೇಜನ ಹಾಗೂ ಸ್ಥಳೀಯವಾಗಿ ಉದ್ಯೋಗ ನೀಡಿ, ವಲಸೆ ಹೋಗುವುದಕ್ಕೆ ಕಡಿವಾಣ ಹಾಕಲು ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ “ಜವಳಿ ಪಾರ್ಕ್‌’ ಸ್ಥಾಪಿಸಲಾಗುತ್ತದೆ ಎಂದರು.ಕೈಮಗ್ಗ ನೇಕಾರರಿಗೆ ಹೊಸ ವಿನ್ಯಾಸ ಪರಿಚಯಿಸಲು ಹಾಗೂ ಉತ್ಪನ್ನಗಳ ಬೇಡಿಕೆ ಮತ್ತು ಆದಾಯ ಹೆಚ್ಚಸಲು, ಉತ್ತರ ಕರ್ನಾಟಕ ಭಾಗದಲ್ಲಿ “ಸ್ಮಾರ್ಟ್‌ ಹ್ಯಾಂಡ್‌ಲೂಮ್‌ ಡಿಸೈನ್‌ ಸ್ಟುಡಿಯೋ’ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದರು.

ರಾಜ್ಯ ಖನಿಜ ನೀತಿ ಜಾರಿ: 2008ರಲ್ಲಿಯೇ, ರಾಜ್ಯ ಖನಿಜ ನೀತಿ ಜಾರಿಗೊಳಿಸಲಾಗಿದೆ. ಗಣಿಗಾರಿಕೆ ಕ್ಷೇತ್ರದಲ್ಲಿ ಮತ್ತಷ್ಟು ಸುಧಾರಣೆ ತರಲು ರಾಷ್ಟ್ರೀಯ ಖನಿಜ ಕಾರ್ಯನೀತಿಗೆ ಸಮವಾಗಿ “ರಾಜ್ಯ ಖನಿಜನೀತಿ 2021-2026′ ಅನ್ನು ಜಾರಿಗೊಳಿಸಲಾಗುತ್ತದೆ ಎಂದು ಹೇಳಿದರು.

ಗಣಿ, ಕಲ್ಲು ಗಣಿ ಗುತ್ತಿಗೆ ಮತ್ತು ಕ್ರಷರ್‌ ಪರವಾನಗಿಗಾಗಿ ಸಲ್ಲಿಸುವ ಅರ್ಜಿಗಳನ್ನು ನಿಗದಿತ ಸಮಯದೊಳಗೆ ವಿಲೇವಾರಿ ಮಾಡಲು ಏಕ ಗವಾಕ್ಷಿ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ. ಜತೆಗೆ, ಪರವಾನಗಿ ಸಂಬಂಧಿತ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲು ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಗಣಿ ಅದಾಲತ್‌ ಪ್ರಾರಂಭಿಸಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next