Advertisement

ದಕ್ಷಿಣ ಕೊರಿಯಾ: ಆಕಾಶ ಮಾರ್ಗ ಮಧ್ಯದಲ್ಲೇ ಎರಡು ವಿಮಾನಗಳ ಡಿಕ್ಕಿ, ಮೂವರು ಪೈಲಟ್ ಸಾವು

12:55 PM Apr 01, 2022 | Team Udayavani |

ಸಿಯೋಲ್: ಎರಡು ತರಬೇತಿ ವಿಮಾನಗಳು ವಾಯು ಮಾರ್ಗ ಮಧ್ಯದಲ್ಲಿಯೇ ಡಿಕ್ಕಿ ಹೊಡೆದ ಪರಿಣಾಮ ಮೂವರು ಪೈಲಟ್ ಗಳು ಸಾವನ್ನಪ್ಪಿದ್ದು, ಓರ್ವ ಪೈಲಟ್ ಗಾಯಗೊಂಡಿರುವ ಘಟನೆ ಶುಕ್ರವಾರ (ಏಪ್ರಿಲ್ 01) ದಕ್ಷಿಣ ಕೊರಿಯಾದಲ್ಲಿ ನಡೆದಿದೆ.

Advertisement

ಇದನ್ನೂ ಓದಿ:ಡಾ. ರವೀಂದ್ರನಾಥ ಶಾನುಭಾಗ್ ಗೆ ಹೃದಯಾಘಾತ: ಚಿಕಿತ್ಸೆಗೆ ಸ್ಪಂದನೆ

ದಕ್ಷಿಣ ಕೊರಿಯಾದ ಆಗ್ನೇಯ ನಗರವಾದ ಸಚೆನ್ ನಲ್ಲಿ ಕೆಟಿ-1 ವಿಮಾನಗಳ ನೆಲೆ ಬಳಿ ಈ ದುರ್ಘಟನೆ ಸಂಭವಿಸಿರುವುದಾಗಿ ವಾಯುಪಡೆ ತಿಳಿಸಿದೆ. ಘಟನೆಯಲ್ಲಿ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದೆ.

ಎರಡು ತರಬೇತಿ ವಿಮಾನಗಳು ಡಿಕ್ಕಿ ಹೊಡೆದ ಘಟನೆಯಲ್ಲಿ ಮೂವರು ಪೈಲಟ್ ಗಳು ಸಾವನ್ನಪ್ಪಿರುವುದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ. ಗಂಭೀರವಾಗಿ ಗಾಯಗೊಂಡ ಪೈಲಟ್ ಅನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಮಾನ ಡಿಕ್ಕಿ ಹೊಡೆದ ಘಟನಾ ಸ್ಥಳಕ್ಕೆ 30ಕ್ಕೂ ಅಧಿಕ ಅಗ್ನಿಶಾಮಕ ದಳ ದೌಡಾಯಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಘಟನೆ ಹೇಗೆ ನಡೆಯಿತು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next