Advertisement

ಅಮೆರಿಕದಲ್ಲಿ 2 ಪ್ರತ್ಯೇಕ ಶೂಟೌಟ್‌: ಇಬ್ಬರು ಸಾವು

01:09 AM Jun 17, 2024 | Team Udayavani |

ಟೆಕ್ಸಾಸ್‌: ಅಮೆರಿಕದಲ್ಲಿ 2 ಪ್ರತ್ಯೇಕ ಶೂಟೌಟ್‌ಗಳು ನಡೆದಿವೆ. ಮೊದಲ ಪ್ರಕರಣ ಟೆಕ್ಸಾಸ್‌ನ ಪಾರ್ಕ್‌ನಲ್ಲಿ ನಡೆದಿದ್ದು, ಇಬ್ಬರು ಅಸುನೀಗಿದ್ದಾರೆ. ಸಂಗೀತ ಕಾರ್ಯ ಕ್ರಮ ನಡೆಯುತ್ತಿದ್ದಾಗ 2 ಗುಂಪುಗಳ ನಡುವಿನ ವಾಗ್ವಾದ ವಿಕೋಪಕ್ಕೆ ತಿರುಗಿ ಗುಂಡು ಹಾರಾಟ ನಡೆದಾಗ ಇಬ್ಬರು ಅಸುನೀಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತೂಂದು ಪ್ರಕರಣದಲ್ಲಿ ಡೆಟ್ರಾಯಿಟ್‌ನ ಉಪನಗರ ಪ್ರದೇಶದಲ್ಲಿ 2 ಕುಟುಂಬಗಳ ಕಾರ್ಯಕ್ರಮದಲ್ಲಿ ಗುಂಡು ಹಾರಾಟ ನಡೆದಿದೆ. ಅದರಲ್ಲಿ ಇಬ್ಬರು ಸಣ್ಣ ಮಕ್ಕಳು, ಮಹಿಳೆ ಸೇರಿ 9 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ 9 ವರ್ಷದ ಬಾಲಕನ ಸ್ಥಿತಿ ಚಿಂತಾಜನಕವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next