Advertisement
ಜು.11ರಂದು ಶಿಕ್ಷೆ ಪ್ರಕಟವಾಗಲಿದೆ. ಟ್ರಂಪ್ 2016ರ ಅಧ್ಯಕ್ಷೀಯ ಚುನಾವಣೆ ವೇಳೆ ಸ್ಪರ್ಧೆಯ ಮೇಲೆ ಪ್ರಭಾವ ಬೀರದಂತೆ “ವಯಸ್ಕ ಸಿನಿಮಾ’ ತಾರೆ ಸ್ಟಾರ್ಮಿ ಡೇನಿಯಲ್ಗೆ 130,000 ಡಾಲರ್ ಹಣ (1.08 ಕೋಟಿ ರೂ.) ನೀಡಿದ್ದು ಸಾಬೀತಾಗಿದೆ ಎಂದು 12 ಮ್ಯಾನ್ಹಟನ್ ನ್ಯಾಯಾಧೀಶರ ಸಮಿತಿ ಗುರುವಾರ ಸರ್ವಾನುಮತದಿಂದ ತೀರ್ಪು ನೀಡಿದೆ. ಇಷ್ಟಾಗಿಯೂ, ಟ್ರಂಪ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸದಿರಲು ನಿರ್ಬಂಧ ಹೇರಿಲ್ಲ. ಅವರು ಈ ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸಲಿದ್ದಾರೆಎನ್ನಲಾಗಿದೆ.
2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಯಾವುದೇ ತೊಂದರೆ ಇಲ್ಲ. ಈ ಪ್ರಕರಣದಲ್ಲಿ ಗರಿಷ್ಠ 4 ವರ್ಷ ಜೈಲು ಶಿಕ್ಷೆಯಾಗಬಹುದು. ಆದರೆ ಜಡ್ಜ್ರನ್ನು ಅವಲಂಬಿಸಿದೆ
Related Articles
Advertisement
ಗೃಹಬಂಧನ ಶಿಕ್ಷೆಯಾದರೆ ಮನೆಯಿಂದಲೇ ವರ್ಚುವಲ್ ಪ್ರಚಾರಕ್ಕೆ ಟ್ರಂಪ್ ಸಿದ್ಧತೆ
ಶಿಕ್ಷೆ ಪ್ರಶ್ನಿಸಿ ಟ್ರಂಪ್ ನ್ಯೂಯಾರ್ಕ್ನ ಉನ್ನತ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಬಹುದು
ಇನ್ನೂ 3 ಪ್ರಕರಣದಲ್ಲಿ ಗಂಭೀರ ಆರೋಪವಿದ್ದು, ಚುನಾವಣೆ ಮೊದಲೇ ಶಿಕ್ಷೆ ಎದುರಿಸಬಹುದು