Advertisement

ಎಟಿಎಂ ವಂಚನೆ: ದಿಲ್ಲಿಯಲ್ಲಿ ಇಬ್ಬರು ರೋಮನ್‌ ಪ್ರಜೆಗಳು ಅರೆಸ್ಟ್‌

07:19 PM Aug 11, 2018 | udayavani editorial |

ಚಂಡೀಗಢ : ಎಟಿಎಂ ವಂಚನೆಗೆ ಸಂಬಂಧಿಸಿ ಇಲ್ಲಿನ ಪೊಲೀಸರು ಇಬ್ಬರು ರೋಮನ್‌ ಪ್ರಜೆಗಳನ್ನು ಇಂದು ಬಂಧಿಸಿದರು.

Advertisement

ಬಂಧಿತರನ್ನು ಮಿಕ್ಲೀ ಲೆಸಿಯಾನ್‌ ಲೋನಟ್‌ ಮತ್ತು ಪ್ಯಾರಾಶ್ಚಿವ್‌ ಜಾರ್ಜ್‌ ಅಲೆತಾಂದ್ರು ಎಂದು ಗುರುತಿಸಲಾಗಿದ್ದು ಇವರಿಬ್ಬರೂ 37ರ ಹರೆಯದವರಾಗಿದ್ದಾರೆ. 

ಹೊಟೇಲ್‌ ಒಂದರಲ್ಲಿ ಠಿಕಾಣಿ ಹೂಡಿದ್ದ ಇವರನ್ನು ದಿಲ್ಲಿ ಪೊಲೀಸರು ದಿಲ್ಲಿಯ ವಸಂತ್‌ ಕುಂಜ್‌ನಲ್ಲಿ ಬಂಧಿಸಿದರು. 

ಎಟಿಎಂ ಗಳಲ್ಲಿ ಬೇಹು ಕ್ಯಾಮೆರಾಗಳನ್ನು ಮತ್ತು ಸ್ಕಿಮ್ಮರ್‌ಗಳನ್ನು ಸೆಟ್‌ ಮಾಡಿ ಹಣ ದೋಚುವ ಉದ್ದೇಶದಿಂದ ತಾವು ಆ.2ರಂದು ಚಂಡೀಗಢಕ್ಕೆ ಬಂದಿದ್ದುದಾಗಿ ಈ ಖದೀಮರು ಪೊಲಿಸರಲ್ಲಿ ತಪ್ಪೊಪ್ಪಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next