Advertisement

ಧರಣಿಗಾಗಿ 2 ರೈಲು ಬುಕ್‌

12:30 AM Feb 10, 2019 | Team Udayavani |

ಅಮರಾವತಿ: ಕೇಂದ್ರ ಸರಕಾರದ ವಿರುದ್ಧ ಬೃಹತ್‌ ಪ್ರತಿಭಟನೆಗೆ ಸಜ್ಜಾಗಿರುವ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರು, ಹೊಸದಿಲ್ಲಿಗೆ ಜನರನ್ನು ಕರೆದೊಯ್ಯಲು ಎರಡು ವಿಶೇಷ ರೈಲುಗಳನ್ನು ಬಾಡಿಗೆಗೆ ಪಡೆದು ಕೊಂಡಿದ್ದಾರೆ. ರೈಲುಗಳನ್ನು ಬುಕ್‌ ಮಾಡಲು ಆಂಧ್ರ ಸರಕಾರ ಬರೋಬ್ಬರಿ 1.12 ಕೋಟಿ ರೂ. ವೆಚ್ಚ ಮಾಡಿದೆ. ಸೋಮ ವಾರ ದೆಹಲಿಯಲ್ಲಿ ಬೃಹತ್‌ ಪ್ರತಿಭಟನೆ ನಡೆಯಲಿದ್ದು, ಅನಂತಪುರ ಹಾಗೂ ಶ್ರೀಕಾಕುಲಂನಿಂದ ರೈಲು ಭಾನುವಾರ ರಾತ್ರಿ ಹೊರಡಲಿದೆ. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಹಾಗೂ ರಾಜ್ಯ ವಿಭಜನೆ ವೇಳೆ ನೀಡಿದ್ದ ಭರವಸೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಟಿಡಿಪಿ ಈ ಹೋರಾಟ ರೂಪಿಸಿದ್ದು, ಬಿಜೆಪಿ ಹೊರತುಪಡಿಸಿ ಪ್ರತಿಪಕ್ಷಗಳ ಮುಖಂಡರೂ ಭಾಗವಹಿಸುವಂತೆ ಆಹ್ವಾನ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next