ಲಾಸ್ ವೇಗಾಸ್: ಎರಡು ಸಣ್ಣ ವಿಮಾನಗಳು ಡಿಕ್ಕಿ ಹೊಡೆದು ನಾಲ್ವರು ಸಾವನ್ನಪ್ಪಿದ ಘಟನೆ ಉತ್ತರ ಲಾಸ್ ವೇಗಾಸ್ ವಿಮಾನ ನಿಲ್ದಾಣದಲ್ಲಿ ಭಾನುವಾರ ನಡೆದಿದೆ.
ಭಾನುವಾರ ಮಧ್ಯಾಹ್ನದ ಸುಮಾರಿಗೆ ಸಿಂಗಲ್ ಇಂಜಿನ್ ಪೈಪರ್ ಪಿಎ-46 ಮತ್ತು ಸಿಂಗಲ್ ಇಂಜಿನ್ ಸೆಸ್ನಾ 172 ಡಿಕ್ಕಿ ಹೊಡೆದಿದೆ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್ ಎಎ) ತಿಳಿಸಿದೆ.
” ಪೈಪರ್ ಪಿಎ-46 ವಿಮಾನ ಲ್ಯಾಂಡ್ ಆಗುತ್ತಿದ್ದಾಗ ಸೆಸ್ನಾ 172ಕ್ಕೆ ಡಿಕ್ಕಿ ಹೊಡೆದಿದೆ ಎಂದು ಪ್ರಾಥಮಿಕ ಮಾಹಿತಿಯು ಸೂಚಿಸುತ್ತದೆ” ಎಂದು ಎಫ್ ಎಎ ಹೇಳಿಕೆಯಲ್ಲಿ ತಿಳಿಸಿದೆ. “ಪೈಪರ್ ಅಪಘಾತಕ್ಕೀಡಾಗಿ ಪೂರ್ವದಲ್ಲಿ ಮೈದಾನದಕ್ಕೆ ಬಿದ್ದರೆ, ಸೆಸ್ನಾ ನೀರು ಹಿಡಿದಿಟ್ಟುಕೊಳ್ಳುವ ಕೊಳಕ್ಕೆ ಬಿದ್ದಿತು” ಎಂದು ಹೇಳಿಕೆ ತಿಳಿಸಿದೆ.
ವಿಮಾನಗಳಲ್ಲಿ ತಲಾ ಇಬ್ಬರು ಜನರಿದ್ದರು ಮತ್ತು ಎಲ್ಲಾ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಮಂಜೂರಾಗಿದೆ ವಸತಿ ಯೋಜನೆ ಮನೆ: ಪ್ರಗತಿಯಲ್ಲಿದೆ ಅರ್ಹ ಫಲಾನುಭವಿಗಳ ಆಯ್ಕೆ
ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಮತ್ತು ಎಫ್ಎಎ ಅಪಘಾತದ ಬಗ್ಗೆ ತನಿಖೆ ಮಾಡುತ್ತಿದೆ.