Advertisement

ಪಾಕ್‌ನಲ್ಲಿ 2 ಏಕದಿನ ಆಡಿ: ಆಸ್ಟ್ರೇಲಿಯಕ್ಕೆ ಪಿಸಿಬಿ ಮನವಿ

06:25 AM Nov 23, 2018 | Team Udayavani |

ಕರಾಚಿ: 2008ರಲ್ಲಿ ಭಯೋತ್ಪಾದಕ ದಾಳಿಯಾದ ನಂತರ ವಿಶ್ವದ ಇತರೆ ಕ್ರಿಕೆಟ್‌ ತಂಡಗಳು ಪಾಕಿಸ್ತಾನದಲ್ಲಿ ಆಡುವುದನ್ನು ನಿಲ್ಲಿಸಿವೆ. ಇದರಿಂದ ಆರ್ಥಿಕವಾಗಿ ಕಂಗೆಟ್ಟಿರುವ ಪಾಕಿಸ್ತಾನ, ತನ್ನ ನೆಲಕ್ಕೆ ಬಂದು ಆಡುವಂತೆ ವಿವಿಧ ದೇಶಗಳನ್ನು ಬೇಡಿಕೊಳ್ಳುತ್ತಿದೆ. 

Advertisement

ಇದೀಗ ಆಸ್ಟ್ರೇಲಿಯ ಕ್ರಿಕೆಟ್‌ ಸಂಸ್ಥೆಗೆ ಬೇಡಿಕೆಯಿಟ್ಟಿರುವ ಪಿಸಿಬಿ, ಮುಂದಿನ ವರ್ಷ ಪಾಕಿಸ್ತಾನದಲ್ಲಿ ಕನಿಷ್ಠ 2 ಏಕದಿನ ಪಂದ್ಯವಾಡುವಂತೆ ಮನವಿ ಮಾಡಿದೆ. ಮುಂದಿನ ವರ್ಷ ಮಾರ್ಚ್‌-ಏಪ್ರಿಲ್‌ನಲ್ಲಿ ಪಾಕಿಸ್ತಾನ-ಆಸ್ಟ್ರೇಲಿಯ ನಡುವೆ 5 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಇದರಲ್ಲಿ 2 ಪಂದ್ಯ ಪಾಕ್‌ನಲ್ಲೇ ನಡೆದರೆ ತಮ್ಮ ದೇಶದ ಕುರಿತು ಬೇರೆ ದೇಶಗಳ ಅಭಿಪ್ರಾಯ ಬದಲಾಗಲಿದೆಯೆನ್ನುವುದು ಪಿಸಿಬಿ ಲೆಕ್ಕಾಚಾರ. ಒಂದು ಆಸ್ಟ್ರೇಲಿಯ ಒಪ್ಪದಿದ್ದರೆ ಯುಎಇಯಲ್ಲಿ ಪಂದ್ಯಗಳು ನಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next