Advertisement

ಭದ್ರತಾ ಪಡೆಗಳ ಕಾರ್ಯಾಚರಣೆ: 2 ನಕ್ಸಲರ ಹತ್ಯೆ

12:22 PM Sep 15, 2019 | Mithun PG |

ಮುಂಬೈ: ಭದ್ರತಾ ಪಡೆಗಳು ನಡೆಸಿದ ಎನ್ ಕೌಂಟರ್ ನಲ್ಲಿ 2 ನಕ್ಸಲರ ಹತ್ಯೆಯಾಗಿ 6 ಮಂದಿಗೆ ಗಾಯಾವಾದ ಘಟನೆ ಮಹಾರಾಷ್ಟ್ರದ ಗಡ್ ಚಿರೋಲಿಯಲ್ಲಿ ನಡೆದಿದೆ.

Advertisement

ನಕ್ಸಲರು ಅರಣ್ಯದಲ್ಲಿ ಅಡಗಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಭದ್ರತಾ ಪಡೆಗಳು, ಇಬ್ಬರನ್ನು ಹತ್ಯೆಗೈಯ್ಯುವಲ್ಲಿ ಯಶಸ್ವಿಯಾಗಿದೆ. ನಕ್ಸಲರಲ್ಲಿದ್ದ ಭಾರೀ ಪ್ರಮಾಣದ ಅಟೋಮ್ಯಾಟಿಕ್  ರೈಫಲ್ಸ್ ಅನ್ನು ವಶಪಡಸಿಕೊಳ್ಳಲಾಗಿದೆ.

ಈ ಹಿಂದೆ 14 ನಕ್ಸಲರನ್ನು ಗಡ್ ಚಿರೋಲಿ ಪೊಲೀಸ್ ಠಾಣೆಯ ಬಳಿ ಎನ್ ಕೌಂಟರ್ ಮಾಡಲಾಗಿತ್ತು.

ಈ ವರ್ಷದ ಮೇ 1 ರಂದು ಪೊಲೀಸರ ಮೇಲೆ ನಡೆದ ದಾಳಿಯ ಪ್ರಮುಖ ಸಂಚುಕೋರ ಭಾಸ್ಕರ್ ಗಡ್ ಚಿರೋಲಿ ಅರಣ್ಯದಲ್ಲಿ ಅಡಗಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು, ಆ ಹಿನ್ನಲೆಯಲ್ಲಿ ಕಾರ್ಯಚರಣೆ ನಡೆಸಲಾಗಿತ್ತು. ಗಾಯಗೊಂಡ ಆರು ನಕ್ಸಲರಲ್ಲಿ ಭಾಸ್ಕರನು ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಏ. 1 ರಂದು ನಡೆಸಿದ್ದ ಕಾರ್ಯಾಚರಣೆಯಲ್ಲಿ ಭಾಸ್ಕರನ ಪತ್ನಿಯನ್ನು ಹತ್ಯೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next