Advertisement

ಧಾರವಾಡ ಆಕಾಶವಾಣಿಗೆ 2 ರಾಷ್ಟ್ರೀಯ ಪ್ರಶಸ್ತಿ

11:10 PM Sep 30, 2019 | Lakshmi GovindaRaju |

ಧಾರವಾಡ: 2018ನೇ ಸಾಲಿನ ಆಕಾಶವಾಣಿಯ ವಾರ್ಷಿಕ ರಾಷ್ಟ್ರೀಯ ಪ್ರಶಸ್ತಿಗಳನ್ನು ನವದೆಹಲಿಯಲ್ಲಿ ಘೋಷಿಸಲಾಗಿದ್ದು. ಧಾರವಾಡ ಆಕಾಶವಾಣಿ ಎರಡು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಕಾರ್ಯಕ್ರಮ ಅಧಿಕಾರಿ ಡಾ|ಬಸು ಬೇವಿನಗಿಡದ ಅವರು ರಚಿಸಿ ನಿರ್ಮಿಸಿದ “ಗೊಂಬೆಯಾಟ’ ರೂಪಕ ಡಾಕ್ಯುಮೆಂಟರಿ ವಿಭಾಗದಲ್ಲಿ ಪ್ರಥಮ ಪ್ರಶಸ್ತಿಗೆ ಭಾಜನವಾಗಿದೆ. ಕೀರ್ತಿ ನಿಡಗುಂದಿ ರಚಿಸಿ ನಿರ್ಮಿಸಿದ “ಹಳಿಕತೆ’ ಕಾರ್ಯಕ್ರಮ ವಿಶೇಷ ರೂಪಕ ವಿಭಾಗದಲ್ಲಿ ಪ್ರಶಂಸಾ ಪತ್ರ ಪಡೆದಿದೆ.

Advertisement

ಗೊಂಬೆಯಾಟ ಕಾರ್ಯಕ್ರಮ ಅಳಿವಿನಂಚಿನಲ್ಲಿರುವ ಸೂತ್ರದ ಗೊಂಬೆಯಾಟ, ತೊಗಲು ಗೊಂಬೆಯಾಟ, ಗೊಂಬೆಯಾಟಗಳ ಪ್ರಾಚೀನತೆ ಮತ್ತು ಮಹತ್ವ ವಿವರಿಸುತ್ತದೆ. ಅದರಲ್ಲಿ ನಾವೀನ್ಯತೆ ಸಾ ಧಿಸಿರುವ ಹಳಿ ಯಾಳದ ಸಿದ್ದಪ್ಪ ಬಿರಾದಾರ ಮತ್ತು ಬಳ್ಳಾರಿಯ ಬೆಳಗಲ್‌ ವೀರಣ್ಣ ಅವರ ಪುತ್ರ ಮಲ್ಲಿಕಾರ್ಜುನ ಅವರ ಸಂದರ್ಶನ ಒಳಗೊಂಡಿತ್ತು. ರೈಲ್ವೆ ಪ್ರಯಾಣದ ರೋಮಾಂಚನ, ಮಿಲನ-ಅಗಲಿಕೆ ಮತ್ತು ಅನೇಕ ಸಿಹಿ-ಕಹಿ ಘಟನೆಗಳ ಸುತ್ತ ಹಳಿಕತೆ ರೂಪಕ ಹೆಣೆಯಲಾಗಿತ್ತು.

ರೈಲ್ವೆ ಇಲಾಖೆಯ ಹಲವು ನಿವೃತ್ತ ಅ ಧಿಕಾರಿಗಳು, ಕಳೆದುಕೊಂಡ ಮಕ್ಕಳನ್ನು ಪಾಲಕರಿಗೆ ತಲುಪಿಸುವ ಸಾಥಿ ಸಂಸ್ಥೆಯವರು ಅನುಭವಗಳನ್ನು ಹಂಚಿಕೊಂಡಿದ್ದರು. ಆಕಾಶವಾಣಿಯ ಹೆಚ್ಚುವರಿ ಮಹಾನಿರ್ದೇಶಕ ಡಾ|ರಾಜಕುಮಾರ ಉಪಾಧ್ಯಾಯ, ಬೆಂಗಳೂರು ಆಕಾಶವಾಣಿ ನಿರ್ದೇಶಕ ಜಿ.ಕೆ. ರವೀಂದ್ರಕುಮಾರ, ಧಾರವಾಡ ಆಕಾಶವಾಣಿಯ ನಿರ್ದೇಶಕ ಸತೀಶ ಪರ್ವತಿಕರ ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದ್ದಾರೆ. ಕಳೆದ ವರ್ಷವೂ ಕೂಡ ಇವರೇ ಪುರಸ್ಕಾರ ಪಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next