Advertisement
ನ. 4ರವರೆಗೆ ರಾಜ್ಯದಲ್ಲಿ ಹೆಚ್ಚು ಪ್ರಮಾಣದಲ್ಲಿ ಮಳೆ ಸುರಿಯಲಿದೆ. ಅ.22ರಿಂದ ಅ.28ರವರೆಗೆ ಲಕ್ಷದ್ವೀಪದಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಐಎಂಡಿ ಹೇಳಿದೆ. ಕೇರಳದಲ್ಲಿ ಅ.14ರಿಂದ ಅ.20ರವರೆಗೆ ಶೇ. 124 ಹೆಚ್ಚುವರಿ ಮಳೆಯಾಗಿದೆ. 72ಮಿ.ಮೀ.ನಷ್ಟಾಗಬೇಕಿದ್ದ ಮಳೆ 161.2 ಮಿ.ಮೀನಷ್ಟಾಗಿದೆ. ಹಾಗೆಯೇ ಅ.1ರಿಂದ ಅ.20ರವರೆಗೆ ರಾಜ್ಯದಲ್ಲಿ ಶೇ.121ರಷ್ಟು ಹೆಚ್ಚುವರಿ ಮಳೆಯಾಗಿದೆ ಎಂದು ತಿಳಿಸಲಾಗಿದೆ.
ರಾಜ್ಯದಲ್ಲಿ ಬಹುತೇಕ ಆಣೆಕಟ್ಟುಗಳು ತುಂಬುವ ಹಂತ ತಲುಪಿವೆ. ಒಳಹರಿವು ಹೆಚ್ಚಿರುವುದರಿಂದ ಗೇಟ್‌ಗಳನ್ನು ತೆಗೆದು ಹೊರಹರಿವು ಹೆಚ್ಚಿಸಲಾಗಿದೆ. ಇನ್ನೆರೆಡು ವಾರಗಳ ಕಾಲ 9 ಅಣೆಕಟ್ಟುಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. 7 ಆಣೆಕಟ್ಟು ಪ್ರದೇಶಕ್ಕೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇದನ್ನೂ ಓದಿ:ಸಿದ್ದರಾಮಯ್ಯ, ನಿಮಗೂ 2 ಡೋಸ್ ಲಸಿಕೆ ಸಿಕ್ಕಿದೆಯಲ್ಲವೇ? : ಬಿಜೆಪಿ ಪ್ರಶ್ನೆ
Related Articles
ಉತ್ತರಾಖಂಡದಲ್ಲಿ ಟ್ರೆಕ್ಕಿಂಗ್ ಹೋಗಿ, ಮಳೆಗೆ ಸಿಲುಕಿ ಕಾಣೆಯಾಗಿದ್ದ 11 ಮಂದಿಯ ಪೈಕಿ ಶುಕ್ರವಾರ ಮತ್ತಿಬ್ಬರ ಮೃತ ದೇಹ ಪತ್ತೆಯಾಗಿದೆ. ಈ ಮೂಲಕ ಮೃತರ ಸಂಖ್ಯೆ 7ಕ್ಕೆ ಏರಿದೆ(ಇಬ್ಬರು ಗುರುವಾರ ಜೀವಂತವಾಗಿ ಸಿಕ್ಕಿದ್ದಾರೆ). ಇನ್ನಿಬ್ಬರಿಗಾಗಿ ಹುಡುಕಾಟ ಮುಂದುವರಿದೆ.
Advertisement