Advertisement

ರಾಯಚೂರಿನಲ್ಲಿ ಕೋವಿಡ್ ಗೆ ಮತ್ತೆರಡು ಬಲಿ ?

01:23 PM Jul 22, 2020 | sudhir |

ರಾಯಚೂರು: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಾವಿನ ಸಂಖ್ಯೆ ಕ್ರಮೇಣ ಹೆಚ್ಚುತ್ತಿದ್ದು, ಇಂದು ಮತ್ತಿಬ್ಬರು ಮೃತಪಟ್ಟಿದ್ದಾರೆ. ಸಮೀಪದ ಶಕ್ತಿನಗರದ ವೈಟಿಪಿಎಸ್ ಕ್ವಾರ್ಟರ್ಸ್ ನಿವಾಸಿ 65 ವರ್ಷದ ವೃದ್ಧ ಮೃತಪಟ್ಟಿದ್ದು. ಜು.21ರಂದು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು.

Advertisement

ಇನ್ನೂ ಮಾನ್ವಿಯ 55 ವರ್ಷದ ವ್ಯಕ್ತಿಯನ್ನು ಜು.15ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರು ಬುಧವಾರ ಮೃತಪಟ್ಟಿದ್ದಾರೆ. ಆದರೆ, ತಜ್ಞ ವೈದ್ಯರ ತಂಡ ಈ ಸಾವು ಕ್ಕೊವಿಡ್ ನಿಂದ ಆಗಿದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಬೇಕಿದಷ್ಟೇ .

ಇನ್ನೂ ಜಿಲ್ಲೆಯಲ್ಲಿ ಒಂದೇ ದಿನ 135 ಕೋವಿಡ್ ಪಾಸಿಟಿವ್ ಪ್ರಕರಣ ದೃಡಪಟ್ಟಿದ್ದು ಜಿಲ್ಲೆಯ ಜನರ ಕಂಗೆಡಿಸಿದೆ. ನಗರವೊಂದರಲ್ಲೇ 100 ಪಾಸಿಟಿವ್ ಪ್ರಕರಣ ದೃಡಪಟ್ಟಿವೆ. ಮಾನ್ವಿ ತಾಲೂಕಿನಲ್ಲಿ 25 , ಸಿಂಧನೂರು 5, ಲಿಂಗಸೂಗೂರು 4, ದೇವದುರ್ಗ 1 ಪ್ರಕರಣ ದೃಡಪಟ್ಟಿದೆ. 654 ಮಾದರಿಗಳ ಪರೀಕ್ಷೆ ನಡೆಸಿದ್ದು, 518 ವರದಿ ನೆಗೆಟಿವ್ ಬಂದಿವೆ.

ಇಂದಿನಿಂದ ಜಿಲ್ಲೆಯಲ್ಲಿ ಅನ್ ಲಾಕ್ ಜಾರಿಯಾಗಿದ್ದು, ಜನಸಂಚಾರ ಹೆಚ್ಚಾಗಿದೆ. ನಗರದಲ್ಲೇ ಪಾಸಿಟಿವ್ ಸಂಖ್ಯೆ ಹೆಚ್ಚಾಗಿ ಬಂದಿರುವುದು ಆತಂಕ ಸೃಷ್ಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next