Advertisement

ರಾಜ್ಯದ ವಿವಿಧೆಡೆ ಇನ್ನೂ 2 ದಿನ ಮಳೆ

08:55 PM May 10, 2023 | Team Udayavani |

ಬೆಂಗಳೂರು: ಮೇ 12ರವರೆಗೆ ರಾಜ್ಯದ ಕೆಲವು ಕಡೆ ಮಳೆ ಬೀಳುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.

Advertisement

ಕರಾವಳಿ ಮತ್ತು ದಕ್ಷಿಣ ಒಳನಾಡಿನ ಎಲ್ಲ ಜಿಲ್ಲೆಗಳ ಹಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳ ಹಲವು ಕಡೆ ಗುಡುಗಿನಿಂದ ಕೂಡಿದ ಭಾರಿ ಮಳೆಯಾಗಲಿದೆ. ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯುವ ಸಾಧ್ಯತೆಗಳಿವೆ.

ಒಂದೆರಡು ಕಡೆಗಳಲ್ಲಿ ಬಿರುಗಾಳಿಯ ವೇಗವು ಗಂಟೆಗೆ 30-40 ಕಿ.ಮೀ.ಇರುವ ಸಾಧ್ಯತೆಗಳಿವೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಮಳೆಯಾಗಲಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಮಳೆ ?: ಬುಧವಾರ ರಾಣೆಬೆನ್ನೂರಿನಲ್ಲಿ 5 ಸೆಂ.ಮೀ. ಮಳೆಯಾದರೆ, ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಕಲಬುರಗಿಯ ಆಳಂದ, ಚಿಕ್ಕಮಗಳೂರಿನ ಬಾಳೆಹೊನ್ನೂರು, ಶಿವನಿ, ಎನ್‌ಆರ್‌ಪುರ, ಹಾಸನದ ಸಿ.ಆರ್‌.ಪಟ್ಟಣ, ಶಿವಮೊಗ್ಗದ ಹುಂಚದ ಕಟ್ಟೆ, ಮೈಸೂರಿನ ತಿ.ನರಸೀಪುರ, ತುಮಕೂರಿನ ಕೋನೆಹಳ್ಳಿ ಕೆವಿಕೆಯಲ್ಲಿ ತಲಾ 4 ಸೆಂ.ಮೀ.ಮಳೆಯಾಗಿದೆ. ಬೀದರ್‌ನ ಮಂಠಾಳ, ಧಾರವಾಡದ ಅಣ್ಣಿಗೆರೆ ಎಆರ್‌ಎಸ್‌, ಚಿಕ್ಕಮಗಳೂರು, ಕೊಳ್ಳೆಗಾಲ, ಕೊಡಗಿನ ಭಾಗಮಂಡಲ, ಹಾಸನದಲ್ಲಿ ತಲಾ 3 ಸೆಂ.ಮೀ. ಮಳೆಯಾಗಿದೆ. ಶಿವಮೊಗ್ಗ, ಚಾಮರಾಜನಗರದಲ್ಲಿ ತಲಾ 2 ಸೆಂ.ಮೀ, ಶ್ರವಣಬೆಳಗೊಳ, ಸೋಮವಾರಪೇಟೆ, ಬೆಂಗಳೂರಿನ ಹೆಸರುಘಟ್ಟ, ರಾಮನಗರದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ಸಿಡಿಲು ಬಡಿದು ವ್ಯಕ್ತಿ ಸಾವು
ಗಂಗಾವತಿ: ಸಿಡಿಲು ಬಡಿದು ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ಮತ್ತೂಬ್ಬ ತೀವ್ರ ಗಾಯಗೊಂಡ ಘಟನೆ ತಾಲೂಕಿನ ಮುಕ್ಕುಂಪಿ-ಜಬ್ಬಲಗುಡ್ಡ ಗ್ರಾಮಗಳ ಬಳಿ ಜರುಗಿದೆ. ಮುಕ್ಕುಂಪಿ ಗ್ರಾಮದ ಹೊರ ವಲಯದಲ್ಲಿ ಕುರಿ ಮೇಯಿಸುತ್ತಿದ್ದ ಯಮನೂರಪ್ಪ ಕುದರಿಮೋತಿ (48) ಎಂಬ ಕುರಿಗಾಹಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಂಬರೀಶ ಬಂಕಾಪುರ(38) ತೀವ್ರ ಗಾಯಗೊಂಡಿದ್ದು, ಗಂಗಾವತಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬುಧವಾರ ಕರಾವಳಿ ಮತ್ತು ಮಲೆನಾಡಿನ ವಿವಿಧೆಡೆ ಕೂಡ ಮಿಂಚು-ಗುಡುಗು ಸಹಿತ ಉತ್ತಮ ಮಳೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next