Advertisement
ಇದನ್ನೂ ಓದಿ:ಪ್ರವೀಣ್ ನೆಟ್ಟಾರ್ ಪ್ರಕರಣದಲ್ಲಿ ಮತ್ತಿಬ್ಬರ ಬಂಧನ: ಹತ್ಯೆಗೈದವರ ಮಾಹಿತಿ ಸಿಕ್ಕಿದೆ ಎಂದ SP
Related Articles
Advertisement
ಅಫ್ಘಾನಿಸ್ತಾನ, ಗುಡ್ಡಪ್ರದೇಶ ಸೇರಿದಂತೆ ಹಲವೆಡೆ ಝವಾಹಿರಿ ಅಡಗುತಾಣ ಪತ್ತೆಗಾಗಿ ರಹಸ್ಯ ಕಾರ್ಯ ನಡೆಸುತ್ತಿದ್ದ ಸಂದರ್ಭದಲ್ಲಿ ಈ ವರ್ಷ ಝವಾಹಿರಿ ಪತ್ನಿ, ಆತನ ಪುತ್ರಿಯರು, ಪುತ್ರರು ಕಾಬೂಲ್ ನಲ್ಲಿ ವಾಸವಾಗಿದ್ದ ಸ್ಥಳವನ್ನು ಕಂಡು ಹಿಡಿಯಲಾಗಿತ್ತು. ರಹಸ್ಯ ಮಾಹಿತಿಯನ್ನು ಏಪ್ರಿಲ್ ತಿಂಗಳಿನಲ್ಲಿ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾಕ್ ಸುಲ್ಲಿವ್ಯಾನ್ ಅವರಿಗೆ ವಿವರಿಸಲಾಗಿತ್ತು. ಅದೇ ರೀತಿ ಅಧ್ಯಕ್ಷ ಜೋ ಬೈಡೆನ್ ಅವರಿಗೂ ಮಾಹಿತಿ ನೀಡಲಾಗಿತ್ತು ಎಂದು ವರದಿ ತಿಳಿಸಿದೆ.
ಕಾಬೂಲ್ ನಲ್ಲಿ ಸುರಕ್ಷಿತ ಪ್ರದೇಶದಲ್ಲಿ ಝವಾಹಿರಿ ವಾಸವಾಗಿದ್ದಾನೋ ಇಲ್ಲವೋ ಎಂಬುದನ್ನು ಖಚಿತಪಡಿಸಲು ಸಿಐಎ ಗುಪ್ತಚರ ಅಧಿಕಾರಿಗಳು ಹಲವಾರು ತಿಂಗಳುಗಳ ಕಾಲ ಮಾಹಿತಿಯನ್ನು ಕಲೆಹಾಕಿದ್ದರು.
ರಹಸ್ಯ ಕಾರ್ಯಾಚರಣೆಗೆ ಸಿದ್ಧತೆ:
ಝವಾಹಿರಿ ವಾಸ್ತವ್ಯ ಹೂಡಿದ್ದ ಕಟ್ಟಡದ ಮಾಹಿತಿ, ಅದರ ಗುಣಮಟ್ಟದ ಬಗ್ಗೆಯೂ ಮಾಹಿತಿ ಕಲೆಹಾಕಲಾಗಿತ್ತು. ಸುತ್ತಮುತ್ತ ನಾಗರಿಕರಿಗೆ ಹಾನಿಯಾಗದಂತೆ ಕಾರ್ಯಾಚರಣೆ ನಡೆಸುವ ಮೂಲಕ ಝವಾಹಿರಿಯನ್ನು ಹತ್ಯೆಗೈಯುವ ಬಗ್ಗೆ ಸಿಐಎ ಹಾಗೂ ಬೈಡೆನ್ ಜೊತೆ ಹಲವು ಸುತ್ತಿನ ಮಾತುಕತೆ ನಡೆದಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಹಸ್ಯ ಕಾರ್ಯಾಚರಣೆಯ ಅಂಗವಾಗಿ ಅಮೆರಿಕ ಮಾರಕ ಹೆಲ್ ಫೈರ್ ಆರ್9x ಮಿಸೈಲ್ ಅನ್ನು ಅಮೆರಿಕ ಬಳಸಿರುವುದು ಜಗಜ್ಜಾಹೀರಾಗಿದೆ. ಇದೊಂದು ಸಿಡಿತಲೆ ರಹಿತ ಮಿಸೈಲ್ ಆಗಿದ್ದು, ಇದು ಆರು ಹರಿತವಾದ ಬ್ಲೇಡ್ ಹೊಂದಿದ್ದು, ನಿಗದಿತ ಗುರಿಯನ್ನು ತಲುಪಿ ಝವಾಹಿರಿಯನ್ನು ಹತ್ಯೆಗೈಯಲಾಗಿತ್ತು. ಇದು ಸ್ಫೋಟ ಮತ್ತು ಶಬ್ದ ರಹಿತ ದಾಳಿಯಾಗಿದೆ ಎಂದು ವರದಿ ವಿವರಿಸಿದೆ.
ಭಯೋತ್ಪಾದಕ ಸಂಘಟನೆಯ ಮುಖಂಡರನ್ನು ಹತ್ಯೆಗೈಯುವ ಸಂದರ್ಭದಲ್ಲಿ ಬಳಸುವ ಡೆಡ್ಲಿ ಶಸ್ತ್ರಾಸ್ತ್ರದ ಬಗ್ಗೆ ಅಮೆರಿಕವಾಗಲಿ ಅಥವಾ ಸಿಐಎ ಆಗಲಿ ಬಹಿರಂಗವಾಗಿ ಯಾವ ಹೇಳಿಕೆಯನ್ನೂ ನೀಡಿಲ್ಲ. 2017ರಲ್ಲಿ ಮೊದಲ ಬಾರಿಗೆ ಅಲ್ ಖೈದಾ ಹಿರಿಯ ಮುಖಂಡ ಅಬು ಅಲ್ ಖೈರ್ ಅಲ್ ಮಸ್ರಿಯನ್ನು ಹತ್ಯೆಗೈಉವ ಸಂದರ್ಭದಲ್ಲಿ ಆರ್ 9x ಮಿಸೈಲ್ ಬಳಸಿತ್ತು ಎಂದು ವರದಿ ತಿಳಿಸಿದೆ.