Advertisement

ಉಕ್ರೇನ್ ನ 2 ಲಕ್ಷ ಮಕ್ಕಳನ್ನು ಬಲವಂತವಾಗಿ ರಷ್ಯಾದಲ್ಲಿಡಲಾಗಿದೆ: ಝೆಲೆನ್ಸ್ಕಿ

03:04 PM Jun 02, 2022 | Team Udayavani |

ಕೀವ್ : ಉಕ್ರೇನ್‌ನಲ್ಲಿ ರಷ್ಯಾದ ಆಕ್ರಮಣವು ನೂರನೇ ದಿನಕ್ಕೆ ಹತ್ತಿರವಾಗುತ್ತಿರುವಾಗ,  2 ಲಕ್ಷ ಮಕ್ಕಳನ್ನು ಬಲವಂತವಾಗಿ ರಷ್ಯಾಕ್ಕೆ ಕರೆದೊಯ್ಯಲಾಗಿದೆ ಎಂಬ ಕಳವಳಕಾರಿ ವಿಚಾರವನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.

Advertisement

ಬುಧವಾರ ರಾತ್ರಿಯ ಭಾಷಣದಲ್ಲಿ ಝೆಲೆನ್ಸ್ಕಿ, ರಷ್ಯಾ ವಶದಲ್ಲಿರುವ ಉಕ್ರೇನಿಯನ್ನರಲ್ಲಿ 2ಲಕ್ಷ ಮಂದಿ ಮಕ್ಕಳು ಇದ್ದಾರೆ ಎಂದು ಆರೋಪಿಸಿದ್ದು, ಎಲ್ಲರನ್ನೂ ಬಲವಂತವಾಗಿ ರಷ್ಯಾಕ್ಕೆ ಕರೆದೊಯ್ಯಲಾಗಿದೆ ಮತ್ತು ವಿಶಾಲವಾದ ದೇಶಾದ್ಯಂತ ಚದುರಿಸಿ ಇರಿಸಲಾಗಿದೆ ಎಂದು ಹೇಳಿರುವುದಾಗಿ ಅಲ್ ಜಜೀರಾ ವರದಿ ಮಾಡಿದೆ.

ಇದನ್ನೂ ಓದಿ : ಭಾರೀ ಮಳೆ, ಪ್ರವಾಹಕ್ಕೆ ಬ್ರೆಜಿಲ್ ತತ್ತರ;ನೂರಾರು ಮನೆ ಕುಸಿತ,ಸಾವಿನ ಸಂಖ್ಯೆ 107ಕ್ಕೆ ಏರಿಕೆ

ಪಶ್ಚಿಮ ಉಕ್ರೇನ್‌ನಲ್ಲಿ ರಷ್ಯಾದ ಕ್ಷಿಪಣಿ, ರೈಲು ಹಳಿಗಳಿಗೆ ಅಪ್ಪಳಿಸಿ ಐವರು ಗಾಯಗೊಂಡಿದ್ದಾರೆ ಎಂದು ಎಲ್ವಿವ್ ಪ್ರಾದೇಶಿಕ ಗವರ್ನರ್ ಮ್ಯಾಕ್ಸಿಮ್ ಕೊಜಿಟ್ಸ್ಕಿ ಘೋಷಿಸಿದ್ದಾರೆ. ಏತನ್ಮಧ್ಯೆ, ಐರ್ಲೆಂಡ್‌ನ ಸೆನೆಟ್ ಆಕ್ರಮಣವನ್ನು “ಜನಾಂಗೀಯ ಹತ್ಯೆಯ ಕೃತ್ಯ” ಎಂದು ಗೊತ್ತುಪಡಿಸುವ ನಿರ್ಣಯವನ್ನು ಅಂಗೀಕರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next