Advertisement
ಗೋವುಗಳ ರಕ್ಷಣೆಗಾಗಿ ಸುಮಾರು 500 ಕೋಟಿ ರೂ. ಅಗತ್ಯವಿದ್ದು, ವಿಶೇಷ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡುವಂತೆ ಪಶುಸಂಗೋಪನ ಇಲಾಖೆ ಸಿಎಂಗೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣ ಕಾಯ್ದೆಯು ಈ ಸಂಬಂಧಿ ಅಧ್ಯಾದೇಶಕ್ಕೆ ರಾಜ್ಯಪಾಲರ ಅಂಕಿತ ದೊರೆತ ತತ್‌ಕ್ಷಣ ಕಾಯ್ದೆ ಜಾರಿಯಾಗಲಿದೆ. ಪ್ರಸ್ತುತದಲ್ಲಿ ಸರಕಾರ ಗೋಶಾಲೆ ನಡೆಸುತ್ತಿಲ್ಲ. ಆದರೆ ಖಾಸಗಿಯವರು ನಡೆಸುವ ಗೋಶಾಲೆಗಳಿಗೆ ಪ್ರತೀ ವರ್ಷ 4 ಕೋಟಿ ರೂ. ನೀಡುತ್ತಿದೆ.
ರಾಜ್ಯದಲ್ಲಿ ಪ್ರತೀ ತಿಂಗಳು ಸುಮಾರು 20 ಸಾವಿರ ಗೋವುಗಳ ವಧೆಯಾಗುತ್ತಿದೆ. ಕಾಯ್ದೆ ಜಾರಿಯಾದ ಬಳಿಕ ಇವುಗಳ ರಕ್ಷಣೆಯ ಹೊರೆ ಸರಕಾರದ ಮೇಲೆ ಬೀಳಲಿದೆ. ಇದಕ್ಕಾಗಿ ಸೂಕ್ತ ಯೋಜನೆ ರೂಪಿಸಲು ಮುಂದಾಗಿರುವ ಸರಕಾರ, ಖಾಸಗಿ ಸಂಘ ಸಂಸ್ಥೆಗಳ ಸಹಕಾರ ಪಡೆಯುವ ಚಿಂತನೆ ನಡೆಸಿದೆ. ನಿರಾಕರಿಸುವಂತಿಲ್ಲ
ಸರಕಾರದ ಅನುದಾನ ಪಡೆದು ನಡೆಸುವ ಗೋಶಾಲೆಗಳ ನಿರ್ವಹಣೆಗೆ ತಿದ್ದುಪಡಿ ಕಾಯ್ದೆಯ ಪ್ರಕಾರ ಕೆಲವು ನಿಯಮಗಳನ್ನು ರೂಪಿಸಲು ಪಶು ಸಂಗೋಪನ ಇಲಾಖೆ ನಿರ್ಧರಿಸಿದ್ದು, ಯಾರೇ ಗೋವುಗಳನ್ನು ತಂದು ಬಿಟ್ಟರೂ ಅವುಗಳನ್ನು ಪಡೆದುಕೊಳ್ಳಲು ನಿರಾಕರಿಸುವಂತಿಲ್ಲ ಎಂಬ ನಿಬಂಧನೆ ಹೇರಲು ಮುಂದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Related Articles
ಗೋಶಾಲೆಗಳ ನಿರ್ವಹಣೆಗಾಗಿಯೇ ಗೋಸೇವಾ ಆಯೋಗ ರಚನೆಗೆ ಸರಕಾರ ನಿರ್ಧಾರ ಮಾಡಿದೆ.
Advertisement
6,390 ಕೋ.ರೂ. ವಾರ್ಷಿಕ ಒಟ್ಟು ಅನುದಾನ2.44 ಕೋ.ರೂ. ಮೀಸಲು ಅನುದಾನ
ಪ್ರತೀ ಹಸುವಿಗೆ ದಿನದ ವೆಚ್ಚ 70 ರೂ.
ಸರಕಾರದ ಅನುದಾನ 17.50 ರೂ.
1.66 ಕೋಟಿ ರೂ. ಈಗಾಗಲೇ ನೀಡಿದ್ದು
50ರಿಂದ 200 1 ಗೋಶಾಲೆಯಲ್ಲಿ ಹಸುಗಳು
3ರಿಂದ 12 ಲಕ್ಷ ರೂ. ಒಂದು ಗೋಶಾಲೆಗೆ ವಾರ್ಷಿಕ ನೆರವು