ಬೆಂಗಳೂರು: ರಾಜಧಾನಿಯಲ್ಲಿ ಸಕ್ರಿಯ ಸೋಂಕು ಪ್ರಕರಣಗಳು ಬರೋಬ್ಬರಿ ಎರಡು ಲಕ್ಷ ಗಡಿದಾಟಿದ್ದು, ದೆಹಲಿ, ಪುಣೆ,ಮುಂಬೈಗಿಂತಲೂ ದುಪ್ಪಟ್ಟು ಹೆಚ್ಚು ಸೋಂಕಿತರು ಚಿಕಿತ್ಸೆ/ಆರೈಕೆಯಲ್ಲಿದ್ದಾರೆ.
ಇನ್ನೊಂದೆಡೆ ನಗರದಲ್ಲಿ ಈವರೆಗೂಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ ಆರು ಸಾವಿರಕ್ಕೆಹೆಚ್ಚಳವಾಗಿದೆ.ಮಂಗಳವಾರ ನಗರದಲ್ಲಿ 17550 ಮಂದಿಗೆ ಸೋಂಕುತಗುಲಿದ್ದು, 97 ಸೋಂಕಿತರ ಸಾವಾಗಿದೆ.
3899 ಮಂದಿಗುಣಮುಖರಾಗಿದ್ದಾರೆ. ನಿರಂತರ ಸೋಂಕು ಪ್ರಕರಣಗಳುಹೆಚ್ಚಳವಾದ ಹಿನ್ನೆಲೆ ಸಕ್ರಿಯ ಪ್ರಕರಣಗಳು 2,06, 223 ಕ್ಕೆತಲುಪಿವೆ. ಈ ಪೈಕಿ 11,500 ಸೋಂಕಿತರು ಆಸ್ಪತ್ರೆಯಲ್ಲಿ, 1500ಸೋಂಕಿತರು ಕೊರೊನಾ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ / ಆರೈಕೆಯಲ್ಲಿದ್ದಾರೆ. ಆಸ್ಪತ್ರೆಯಲ್ಲಿರುವವರಲ್ಲಿ 590 ಮಂದಿ ಆರೋಗ್ಯಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಾಕಿ 1.93 ಲಕ್ಷ ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ.ಮಹಾನಗರಗಳಾದ ದೆಹಲಿ 1.1 ಲಕ್ಷ, ಪುಣೆ 1.1 ಲಕ್ಷ, ಮುಂಬೈ75 ಸಾವಿರ ಸಕ್ರಿಯ ಸೋಂಕಿತರಿದ್ದಾರೆ. ಈ ನಗರಗಳಿಗೆ ಹೋಲಿಸಿದರೆಸಕ್ರಿಯ ಪ್ರಮಾಣ ದುಪ್ಪಟ್ಟಿದೆ.ಈ ಮೂಲಕ ನಗರದ ಒಟ್ಟಾರೆ ಸೋಂಕು ಪ್ರಕರಣಗಳು 6.87 ಲಕ್ಷಕ್ಕೆಹೆಚ್ಚಳವಾಗಿದ್ದು, 4.75 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಕಳೆದಒಂದು ವಾರದಿಂದ ಸರಾಸರಿ 100ಕ್ಕೂ ಅಧಿಕ ಸೋಂಕಿತರು ನಗರದಲ್ಲಿಸಾವಿಗೀಡಾಗಿದ್ದು, ಒಟ್ಟಾರೆ ಮೃತರ ಸಂಖ್ಯೆ 6,002ಕ್ಕೆ ಹೆಚ್ಚಳವಾಗಿದೆ.ಸೋಮವಾರಕ್ಕೆ ಹೋಲಿಸಿದರೆ ಮಂಗಳವಾರ ಹೊಸ ಪ್ರಕರಣಗಳುಒಂದು ಸಾವಿರ ಹೆಚ್ಚಾಗಿದ್ದು, ಎಂಟು ಸಾವು ಕಡಿಮೆಯಾಗಿದೆ.