ಗುವಾಹಟಿ: ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೇಳುವ ಎಲ್ಲ ಲಕ್ಷಣಗಳೂ ಗೋಚರಿಸಿದ್ದು, ಸೋಮವಾರ ಕುಕಿ-ಝೋ ಸಮುದಾಯಕ್ಕೆ ಸೇರಿರುವ ಇಬ್ಬರನ್ನು ಹತ್ಯೆಗೈಯ್ಯಲಾಗಿದೆ.
Advertisement
ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೈತೇಯಿ ಬಂಡುಕೋರರು ದಾಳಿ ನಡೆಸಿ, ಈ ಕೃತ್ಯವೆಸಗಿದೆ ಎಂದು ಕಮಿಟಿ ಆನ್ ಟ್ರೈಬಲ್ ಯುನಿಟಿ ಸಂಘಟನೆ ಆರೋಪಿಸಿದೆ.
ಹರೋತೇಲ್ ಮತ್ತು ಕೋಬ್‌ಶಾ ಗ್ರಾಮದಲ್ಲಿ ಮೈತೇಯಿ ಬಂಡುಕೋರರು ಅಪ್ರಚೋದಿತ ದಾಳಿ ನಡೆಸಿ, ಇಬ್ಬರು ಕುಕಿ ಯುವಕರನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ ಎಂದು ಸಂಘಟನೆ ದೂರು ನೀಡಿದೆ.