Advertisement

ಎಸ್‌-400 ಕ್ಷಿಪಣಿ ಖರೀದಿ ಭಾರತಕ್ಕೆ ನಿರ್ಬಂಧ ಬೇಡ

01:21 AM Oct 28, 2021 | Team Udayavani |

ವಾಷಿಂಗ್ಟನ್‌: ರಷ್ಯಾದಿಂದ ಎಸ್‌-400 ಟ್ರೈಂಫ್ ಕ್ಷಿಪಣಿ ರಕ್ಷ ಣ ವ್ಯವಸ್ಥೆ ಖರೀದಿಸುವ ಒಪ್ಪಂದ ಮಾಡಿಕೊಂಡಿರುವುದಕ್ಕೆ ಭಾರತದ ಮೇಲೆ ಹೇರಲಾಗಿರುವ ನಿರ್ಬಂಧವನ್ನು ತೆಗೆದುಹಾಕುವಂತೆ ಅಮೆರಿಕದ ಇಬ್ಬರು ಸಂಸದರು ಅಧ್ಯಕ್ಷ ಜೋ ಬೈಡೆನ್‌ ಅವರಿಗೆ ಮನವಿ ಮಾಡಿದ್ದಾರೆ.

Advertisement

2019ರಲ್ಲಿ ಭಾರತ ಎಸ್‌-400 ಕ್ಷಿಪಣಿ ರಕ್ಷ ಣ ವ್ಯವಸ್ಥೆ ಖರೀದಿಗೆ ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಹೀಗಾಗಿ, ಭಾರತದ ಅಮೆರಿಕದ ಹಿತಾಸಕ್ತಿ ವಿರುದ್ಧವಾಗಿ ಒಪ್ಪಂದ ಮಾಡಿಕೊಂಡಿದ್ದರಿಂದ ನಿರ್ಬಂಧ ಹೇರಲಾಗಿತ್ತು.

ಇದನ್ನೂ ಓದಿ:ಪಶ್ಚಿಮ ಬಂಗಾಳದಲ್ಲಿ ಪಟಾಕಿ ಬ್ಯಾನ್‌

ಆದರೆ ಅಮೆರಿಕದ ಹಿತಾಸಕ್ತಿಗೆ ಸಂಬಂಧಿಸಿದ ಕಾಯ್ದೆ 2017ರಲ್ಲಿ ಜಾರಿಗೆ ಬಂದಿದ್ದು, ಭಾರತ ಅದಕ್ಕೂ ಮೊದಲೇ ರಷ್ಯಾದಿಂದ ಎಸ್‌-400 ಖರೀದಿ ಮಾತುಕತೆ ನಡೆಸಿತ್ತು. ಹಾಗೂ ಶಸ್ತ್ರಾಸ್ತ್ರಗಳ ವಿಚಾರದಲ್ಲಿ ರಷ್ಯಾದಿಂದ ಸ್ವತಂತ್ರವಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಈ ನಿರ್ಬಂಧದಿಂದ ಹೊರಗಿಡಬೇಕೆಂದು ಸಂಸದರಾಗಿರುವ ಮಾರ್ಕ್‌ ವಾರ್ನರ್‌ ಮತ್ತು ಜಾನ್‌ ಕಾರ್ನಿನ್‌ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next