Advertisement
ಬಿಹಾರದ ಭಾಗಲ್ಪುರದ ಗಣಿತ ಶಿಕ್ಷಕ ಸತ್ಯಮ್ ಮಿಶ್ರಾ ಮತ್ತು ಹೈದರಾಬಾದ್‌ನ ಇಂಗ್ಲಿಷ್, ಗಣಿತ, ಸಮಾಜ ಅಧ್ಯಯನ ಶಿಕ್ಷಕಿ ಮೇಘನಾ ಮಸುನೂರಿ ಅವರೇ ರೇಸ್‌ನಲ್ಲಿರುವ ಭಾರತೀಯ ಶಿಕ್ಷಕರು. ಯುನೆಸ್ಕೋ ಸಹಭಾಗಿತ್ವದಲ್ಲಿ ವರ್ಕೇ ಫೌಂಡೇಶನ್ ಪ್ರತೀ ವರ್ಷ ಈ ಪ್ರಶಸ್ತಿಯನ್ನು ನೀಡುತ್ತದೆ. ಪ್ರಶಸ್ತಿಯು 7.30 ಕೋಟಿ ರೂ.ಗಳ ನಗದು ಬಹುಮಾನವನ್ನು ಹೊಂದಿದೆ. ಈ ವರ್ಷ 121 ದೇಶಗಳ 8 ಸಾವಿರ ಶಿಕ್ಷಕರು ನಾಮನಿರ್ದೇಶನಗೊಂಡಿದ್ದರು. ನವೆಂಬರ್‌ನಲ್ಲಿ ವಿಜೇತರ ಹೆಸರು ಘೋಷಣೆಯಾಗಲಿದೆ. ಕಳೆದ ವರ್ಷದ ಜಾಗತಿಕ ಪ್ರಶಸ್ತಿಯು ಮಹಾರಾಷ್ಟ್ರದ ಶಿಕ್ಷಕ ರಂಜಿತ್‌ಸಿನ್ಹಾ ದಿಸಾಲೆ ಅವರಿಗೆ ಸಂದಿತ್ತು.
Advertisement
ಜಾಗತಿಕ ಪ್ರಶಸ್ತಿಗೆ ಸ್ಪರ್ಧೆ: ಭಾರತದ ಇಬ್ಬರು ಶಿಕ್ಷಕರು
07:47 AM Sep 10, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.