Advertisement

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

05:34 PM Apr 19, 2024 | Team Udayavani |

ವಾಷಿಂಗ್ಟನ್:‌ ತೆಲಂಗಾಣ ಮತ್ತು ಆಂಧ್ರಪ್ರದೇಶದ ವಿದ್ಯಾರ್ಥಿನಿಯರಿಬ್ಬರು ನ್ಯೂಜೆರ್ಸಿಯ ಹೆಚ್‌ ಒನೊಕೆನ್‌ ನಲ್ಲಿ ಸ್ಥಳೀಯ ಕಿರಾಣಿ ಅಂಗಡಿಯಲ್ಲಿ ಬಂಧಿಸಲಾಗಿದೆ. ಬಂಧಿತರನ್ನು  ಹೈದರಾಬಾದ್‌ ನ ಭವ್ಯ ಲಿಂಗನಗುಂಟಾ(20ವರ್ಷ)ಹಾಗೂ ಗುಂಟುರಿನ ಯಾಮಿನಿ ವಾಲ್ಕಲ್‌ ಪುಡಿ (22ವರ್ಷ) ಎಂದು ಗುರುತಿಸಲಾಗಿದೆ.

Advertisement

ಇದನ್ನೂ ಓದಿ:RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ಹೊಬೊಕನ್‌ ನ ಶಾಪ್‌ ರಿಟ್‌ ನಲ್ಲಿ ಈ ಘಟನೆ ನಡೆದಿರುವುದಾಗಿ ವರದಿ ವಿವರಿಸಿದೆ. ಇಬ್ಬರು ವಿದ್ಯಾರ್ಥಿನಿಯರು ಎರಡು ವಸ್ತುಗಳನ್ನು ಖರೀದಿಸಿ ಹಣ ಪಾವತಿಸಿದ್ದರು, ಆದರೆ ಹೆಚ್ಚುವರಿಯಾಗಿ ಖರೀದಿಸಿದ್ದ 27 ವಸ್ತುಗಳ (155.61 ಡಾಲರ್)‌ ಹಣ ಪಾವತಿಸದೇ ತೆರಳಲು ಯತ್ನಿಸಿದ್ದರು.

ಪ್ರಕರಣದ ಬಗ್ಗೆ ಸ್ಟೋರ್‌ ಮ್ಯಾನೇಜರ್‌ ಹೊಬೋಕನ್‌ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಇಬ್ಬರು ವಿದ್ಯಾರ್ಥಿನಿಯರನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.‌

Advertisement

ವಿದ್ಯಾರ್ಥಿನಿಯೊಬ್ಬಳು ವಿಚಾರಣೆ ವೇಳೆ, ತನ್ನ ಖಾತೆಯಲ್ಲಿ ಲಿಮಿಟೆಡ್‌ ಬ್ಯಾಲೆನ್ಸ್‌ ಇದ್ದಿರುವುದಾಗಿ ತಿಳಿಸಿದ್ದು, ಮತ್ತೊಬ್ಬಳು ವಿದ್ಯಾರ್ಥಿನಿ ಕೆಲವು ವಸ್ತುಗಳ ಹಣ ಪಾವತಿಸಲು ಮರೆತುಬಿಟ್ಟಿರುವುದಾಗಿ ಹೇಳಿದ್ದಳು. ಬಳಿಕ ಇಬ್ಬರೂ ವಿದ್ಯಾರ್ಥಿನಿಯರು ದುಪ್ಪಟ್ಟು ಹಣ ನೀಡುವುದಾಗಿ ತಿಳಿಸಿ, ಇನ್ಮುಂದೆ ಇಂತಹ ಅಪರಾಧ ಪುನರಾವರ್ತಿಸುವುದಿಲ್ಲ ಎಂದು ಭರವಸೆ ನೀಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಬಂಧನಕ್ಕೊಳಗಾದರೆ ತಮ್ಮ ಭವಿಷ್ಯದಲ್ಲಿನ ಉದ್ಯೋಗ ಮತ್ತು ವೀಸಾ ಪ್ರಕ್ರಿಯೆ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂದು ಇಬ್ಬರು ಕಳವಳ ವ್ಯಕ್ತಪಡಿಸಿರುವುದು ವಿಡಿಯೋದಲ್ಲಿದೆ.

ವಸ್ತುಗಳ ಕಳ್ಳತನ ಅಪರಾಧವಾಗಿದೆ. ಇನ್ಮುಂದೆ ಭವಿಷ್ಯದಲ್ಲಿ ಈ ಸ್ಟೋರ್‌ ಗೆ ಭೇಟಿ ನೀಡುವುದಿಲ್ಲ ಎಂದು ಲಿಖಿತ ರೂಪದಲ್ಲಿ ಬರೆದುಕೊಡಬೇಕು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿರುವುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next