Advertisement

I.N.D.I.A ಕೂಟದಲ್ಲಿ ವರ್ಷಕ್ಕೆ ಒಬ್ಬರನ್ನು ಪ್ರಧಾನಿಯನ್ನಾಗಿಸಲು ಚಿಂತನೆ: ಅಣ್ಣಾಮಲೈ

07:39 PM May 02, 2024 | Team Udayavani |

ರಬಕವಿ-ಬನಹಟ್ಟಿ: ನಮ್ಮ ಮನೆ, ಊರು, ಸಮಾಜ ಮತ್ತು ದೇಶ ಅಭಿವೃದ್ಧಿಗಾಗಿ ಮೋದಿ ಪ್ರಧಾನಿಯಾಗಬೇಕು. ಆದ್ದರಿಂದ ಪಕ್ಷದ ಕಾರ್ಯಕರ್ತರು ಮುಂದಿನ ಮೂರು ದಿನಗಳ ಕಾಲ ಪ್ರಾಮಾಣಿಕವಾಗಿ ಮತ್ತು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಿ ಇಲ್ಲಿನ ಲೋಕಸಭಾ ಅಭ್ಯರ್ಥಿ ಪಿ. ಸಿ. ಗದ್ದಿಗೌಡರ ಅವರನ್ನು ಗೆಲ್ಲಿಸಬೇಕು ಎಂದು ತಮಿಳುನಾಡು ಬಿಜೆಪಿ ರಾಜಾಧ್ಯಕ್ಷ ಅಣ್ಣಾಮಲೈ ಮನವಿ ಮಾಡಿದರು.

Advertisement

ಗುರುವಾರ ಸಮೀಪದ ದಾನೇಶ್ವರಿ ಕಲ್ಯಾಣ ಮಂಟಪದಲ್ಲಿ ಬೃಹತ್ ಬೈಕ್ ರ್‍ಯಾಲಿಯ ನಂತರ ನಡೆದ ಸಮಾವೇಶದಲ್ಲಿ ಮಾತನಾಡಿದರು.

ಇಂಡಿಯಾ ಮೈತ್ರಿ ಕೂಟದಲ್ಲಿ ಯಾರು ಪ್ರಧಾನಿಯಾಗಬೇಕು ಎಂಬುದು ಸ್ಪಷ್ಠವಾಗಿಲ್ಲ. ಐದು ಪ್ರಮುಖ ಪಕ್ಷಗಳು ವರ್ಷಕ್ಕೆ ಒಬ್ಬರಂತೆ ಪ್ರಧಾನಿಯನ್ನಾಗಿಸಲು ಚಿಂತನೆ ಮಾಡುತ್ತಿವೆ. ದೇಶದ ಶೇ. 40 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ತನ್ನಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಬಿಜೆಪಿ ತನ್ನ ಅಧಿಕಾರವಧಿಯಲ್ಲಿ ಹಿಂದುಗಳಿದ ಜನಾಂಗದ ಇಬ್ಬರನ್ನು ರಾಷ್ಟ್ರಪತಿಗಳನ್ನಾಗಿಸಿದೆ. ದೇಶದ ಶ್ರೇಷ್ಠ ಪ್ರಶಸ್ತಿಗಳನ್ನು ಗ್ರಾಮೀಣ ಪ್ರದೇಶದಲ್ಲಿ ಸಾಧನೆ ಮಾಡಿದವರಿಗೆ ನೀಡಿದ್ದು ಮೋದಿ ಸರ್ಕಾರ. ನಮ್ಮ ಮಕ್ಕಳ, ಯುವಕರ, ಮಹಿಳೆಯರ ಉತ್ತಮ ಭವಿಷ್ಯಕ್ಕಾಗಿ ಮೋದಿಯವರು ಪ್ರಧಾನಿಯಾಗಬೇಕು ಎಂದರು.

ಬಿಜೆಪಿ ಯುವಮೋರ್ಚಾ ಘಟಕದ ಅಧ್ಯಕ್ಷ ಧೀರಜ್ ಮುನಿರಾಜು ಮಾತನಾಡಿ, ಮಂತ್ರಿಗಳ ಮಕ್ಕಳಿಗೆ ಟಿಕೆಟ್ ನೀಡುವುದು ಕಾಂಗ್ರೆಸ್ ಪಕ್ಷದ ಸಂಸ್ಕೃತಿಯಾದರೆ ಸಾಮಾನ್ಯ ವ್ಯಕ್ತಿಗಳಿಗೆ ಟಿಕೆಟ್ ನೀಡಿದ್ದು ಬಿಜೆಪಿ. ಹತ್ತು ವರ್ಷಗಳ ಬಿಜೆಪಿ ಬಿಜೆಪಿ ಆಡಳಿತದಲ್ಲಿ ಯಾವುದೆ ಭಷ್ಟಾಚಾರ ಮತ್ತು ಅವ್ಯವಹಾರ ನಡೆದಿಲ್ಲ. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರೂ. 12 ಲಕ್ಷ ಕೋಟಿಯಷ್ಟು ಅವ್ಯಹಾರ ನಡೆದಿತ್ತು. ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದರೆ ಅದು ದೇಶದ ಪ್ರಗತಿಗೆ ವಿರುದ್ಧವಾಗಿ ಮತ ನೀಡಿದಂತೆ ಎಂದರು.

ರಬಕವಿ, ಬನಹಟ್ಟಿ, ರಾಮಪುರ ಮತ್ತು ಹೊಸೂರಗಳಲ್ಲಿ ಬೃಹತ್ ರೋಡ್ ಶೋ ಮತ್ತ ಬೈಕ್ ಮೆರವಣಿಗೆ ನಡೆಯಿತು. ಶಾಸಕ ಸಿದ್ದು ಸವದಿ ಮಾತನಾಡಿದರು.

Advertisement

ಧರೆಪ್ಪ ಉಳ್ಳಾಗಡ್ಡಿ, ಶ್ರೀಶೈಲ ಬೀಳಗಿ, ಡಾ.ಮಹಾವೀರ ದಾನಿಗೊಂಡ, ಸುರೇಶ ಅಕ್ಕಿವಾಟ, ಡಿ.ಆರ್. ಪಾಟೀಲ, ಪುಂಡಲೀಕ ಪಾಲಭಾವಿ, ಪರಶುರಾಮ ಬಸವ್ವಗೋಳ, ಪವಿತ್ರಾ ತುಕ್ಕನ್ನವರ, ಸವಿತಾ ಹೊಸೂರ, ಸಂಜಯ ತೆಗ್ಗಿ, ಬಸವರಾಜ ತೆಗ್ಗಿ, ಬಸು ಅಮ್ಮಣಗಿಮಠ, ಸಿದ್ದು ಅಮ್ಮಣಗಿ, ರಾಮಣ್ಣ ಭದ್ರನವರ, ಎಸ್.ಎಸ್.ಹೂಲಿ, ಸುವರ್ಣಾ ಕೊಪ್ಪದ, ಗೌರಿ ಮಿಳ್ಳಿ, ಶ್ರೀಶೈಲ ಯಾದವಾಡ, ಶಿವಾನಂದ ಗಾಯಕವಾಡ, ಈರಣ್ಣ ಚಿಂಚಖಂಡಿ, ಅಶೋಕ ರಾವಳ, ಶಿವಾನಂದ ಕಾಗಿ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next