Advertisement
ಗಿನ್ನೆಸ್ ಸಂಸ್ಥೆಯ ಎಡ್‌ಜ್ಯುಡಿಕೇಟರ್ ರಿಷಿನಾಥ್ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿ ರವಿವಾರ ಸಂಸ್ಥೆಯ ಕಾರ್ಯದರ್ಶಿ, ಪ್ರಾಂಶುಪಾಲ ಎಚ್. ಶರಣ ಕುಮಾರ ಅವರಿಗೆ ಗಿನ್ನೆಸ್ ವಿಶ್ವ ದಾಖಲೆಯ ಪ್ರಮಾಣ ಪತ್ರ ಹಸ್ತಾಂತರಿಸಿದರು. ಸಂಸ್ಥೆಯ ಉಪಾಧ್ಯಕ್ಷ ವೇ| ಮೂ| ಬಾಲಚಂದ್ರ ಭಟ್, ಆಡಳಿತಾಧಿಕಾರಿ ವೀಣಾರಶ್ಮಿ, ರಮಾದೇವಿ ಆರ್. ಭಟ್ ಹಾಗೂ ಗಿನ್ನೆಸ್ ದಾಖಲೆ ಮಾರ್ಗದರ್ಶಕ ಪೃಥ್ವೀಶ್ ಕೆ., ಉಪಪ್ರಾಂಶುಪಾಲ ರಾಮ ದೇವಾಡಿಗ ಉಪಸ್ಥಿತರಿದ್ದರು.
ಸಂಸ್ಥೆಯ ರಜತ ಮಹೋತ್ಸವ ವರ್ಷಾಚರಣೆ ಸಂದರ್ಭ ಗ್ರಾಮಾಂತರದ ಶಾಲಾ ವಿದ್ಯಾರ್ಥಿಗಳು ಮಾಡಿದ ಸಾಧನೆ ವಿಶ್ವಮಟ್ಟದಲ್ಲಿ ಚರಿತ್ರೆಯ ಪುಟಗಳಲ್ಲಿ ದಾಖಲೆ ಬರೆದಿದೆ. ರೊಟೇಟಿಂಗ್ ರೂಬಿಕ್ ಕ್ಯೂಬ್‌ನಲ್ಲಿ ಹಟ್ಟಿಯಂಗಡಿ ಸಿದ್ಧಿವಿನಾಯಕ ವಸತಿ ಶಾಲೆಯ ಸಂಸ್ಥಾಪಕ ಎಚ್. ರಾಮಚಂದ್ರ ಭಟ್ ಅವರ ಮೊಸಾಯಿಕ್ ಭಾವಚಿತ್ರ ರಚಿಸಲು 1,228 ಮಂದಿ ಭಾಗಿಯಾಗಿದ್ದರು.
Related Articles
1,228 ಮಂದಿ 1,300ರಷ್ಟು ಕ್ಯೂಬ್‌ಗಳಲ್ಲಿ 7.75×5.625 ಚ.ಅಡಿ ಉದ್ದಳತೆಯ 42.78 ಚ.ಅಡಿ ವಿಸ್ತೀರ್ಣದಲ್ಲಿ ಎಚ್. ರಾಮಚಂದ್ರ ಭಟ್ ಅವರ ಚಿತ್ರ ಮೂಡಿಸಲಾಯಿತು. ಯು.ಕೆ.ಯ ರೂಬಿಕ್ಸ್ ಬ್ರಾಂಡ್ ಲಿಮಿಟೆಡ್ 308 ಜನರ ಪಾಲ್ಗೊಳ್ಳುವಿಕೆಯೊಂದಿಗೆ ಮಾಡಿದ ರಚನೆಯ ದಾಖಲೆ ಇಲ್ಲಿ ಮುರಿದು ಬಿತ್ತು.
Advertisement
ಘೋಷಣೆಕಳೆದ 4 ದಿನಗಳಿಂದ ಪ್ರತ್ಯಕ್ಷದರ್ಶಿಯಾಗಿದ್ದ ಗಿನ್ನೆಸ್ ಸಂಸ್ಥೆಯ ಎಡ್‌ಜ್ಯುಡಿಕೇಟರ್ ರಿಷಿನಾಥ್, ಸಾಧನೆಯ ಪರಿಶೀಲನೆ ನಡೆಸಿ, ಖಾಸಗಿ ಸರ್ವೆಯರ್‌ರಿಂದ ಅಳತೆ ಮಾಡಿಸಿ, ದಾಖಲೆ ಖಚಿತವಾದ ಬಳಿಕ, ನೂತನ ಗಿನ್ನೆಸ್ ವಿಶ್ವದಾಖಲೆಯ ಘೋಷಣೆ ಮಾಡಿದರು. ಆರೋಗ್ಯ ಹಾಗೂ ಶಿಕ್ಷಣ ಇಲಾಖೆಯ 16 ಗಜೆಟೆಡ್ ಅಧಿಕಾರಿಗಳು, 16 ಮಂದಿ ಸಾಕ್ಷಿಗಳು ದೃಢೀಕರಿಸಿದರು. ಸಂಭ್ರಮ
ಎರಡು ವಿಶ್ವ ದಾಖಲೆಯ ಗುರಿಯಲ್ಲಿ ಗುರುವಾರ ಗಣ್ಯರ ಉಪಸ್ಥಿತಿಯಲ್ಲಿ ಆರಂಭವಾದ ರೂಬಿಕ್ ಕ್ಯೂಬ್ ರಚನೆಯಲ್ಲಿ ಪಾಲ್ಗೊಂಡ ಸಹಪಾಠಿಗಳನ್ನು ಕ್ಷಣ ಕ್ಷಣಕ್ಕೂ ಉತ್ತೇಜಿಸುತ್ತಿದ್ದ ವಿದ್ಯಾರ್ಥಿಗಳು ನಿರೀಕ್ಷೆಯ ಅವಧಿಗಿಂತ ಮೊದಲೇ ಯಾವುದೇ ವೈಫಲ್ಯವಿಲ್ಲದೇ ದಾಖಲೆಯ ಗುರಿ ಮುಟ್ಟಿದಾಗ ಹಷೊìàದ್ಗಾರ ಮಾಡಿ ಜಯ ಘೋಷ ಹಾಕಿ ಕುಣಿದು ಸಂಭ್ರಮಿಸಿದರು. ಮೊದಲ ದಾಖಲೆ
ಡಿ. 1ರಂದು 50 ವಿದ್ಯಾರ್ಥಿಗಳು 6,000 ಕ್ಯೂಬ್‌ಗಳನ್ನು ಬಳಸಿಕೊಂಡು 19.198 ಚ.ಮೀ ವಿಸ್ತೀರ್ಣದಲ್ಲಿ ದ್ವಿಮುಖ ಚಿತ್ರ ರಚಿಸಿ ಗಿನ್ನೆಸ್ ದಾಖಲೆ ನಿರ್ಮಿಸಿದ್ದರು. ಒಂದು ಬದಿಯಲ್ಲಿ ಹಾಕಿ ಮಾಂತ್ರಿಕ ಮೇ| ಧ್ಯಾನಚಂದ್, ಇನ್ನೊಂದು ಬದಿಯಲ್ಲಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರ ಚಿತ್ರ ರಚಿಸಿದ್ದರು. ಈ ಮೂಲಕ ಕಝಕಿಸ್ಥಾನದ ಝೆಂಗಿಸ್ ಐಟಾjನೋವ್ 5,100 ಕ್ಯೂಬ್‌ಗಳೊಂದಿಗೆ ನಿರ್ಮಿಸಿದ್ದ 15.878 ಚ.ಮೀ.ವಿಸ್ತಿರ್ಣದ ದಾಖಲೆ ಮುರಿದು ಬಿತ್ತು. ಪೃಥೀÌಶ್ ಅವರದ್ದು ಇದು 4ನೆಯ ದಾಖಲೆಯಾಗಿದೆ. ಕಳೆದ ವರ್ಷ ನವಂಬರ್‌ನಿಂದ ಮಕ್ಕಳಿಗೆ ರೂಬಿಕ್ ಕ್ಯೂಬ್ ಸವಾಲು ಬಿಡಿಸಲು, ಜೂನ್‌ನಿಂದ ಚಿತ್ರ ಬಿಡಿಸಲು ತರಬೇತಿ ನೀಡಲಾಗುತ್ತಿತ್ತು. 7,500ರಷ್ಟು ಕ್ಯೂಬ್‌ಗಳನ್ನು ಸಮೀಪದ ಸರಕಾರಿ ಕನ್ನಡ ಶಾಲೆಗಳಿಗೆ ಉಚಿತವಾಗಿ ನೀಡಿ ಅವರಿಗೆ ತರಬೇತಿ ನೀಡಲಾಗುವುದು. ಮೊಬೈಲ್‌ನಿಂದ ದೂರ ಇರಿಸಲು, ಏಕಾಗ್ರತೆಗೆ, ಮನೋ ಸಾಮರ್ಥ್ಯ ವೃದ್ಧಿಗೆ ಇದು ಸಹಕಾರಿ ಎಂದು ಶರಣ ಕುಮಾರ್ ಹೇಳಿದರು. ಎರಡು ದಾಖಲೆ
ಎಲ್ಲ ಮಕ್ಕಳು ಒಟ್ಟಾಗಿ 4 ದಿನಗಳಲ್ಲಿ ಎರಡು ಗಿನ್ನೆಸ್ ವಿಶ್ವದಾಖಲೆ ನಿರ್ಮಿಸುವ ಮೂಲಕ ಭಾರತದ ಹೆಸರು ವಿಶ್ವಮಟ್ಟದಲ್ಲಿ ಮೂಡುವಂತೆ ಮಾಡಿದ ಸಂತೃಪ್ತಿ ಇದೆ.
ಎಚ್. ಶರಣ ಕುಮಾರ , ಪ್ರಾಂಶುಪಾಲರು, ಹಟ್ಟಿಯಂಗಡಿ
-ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ