Advertisement
ಅನಗತ್ಯ ಮಾಹಿತಿ, ದಾಖಲೆ ಕೇಳಿ ಫಲಾನುಭವಿಗಳು ರೋಸಿ ಹೋಗುವಂಥ ಸನ್ನಿವೇಶ ಸೃಷ್ಟಿಸ ಬೇಡಿ. ಕುಂಟು ನೆಪ ಹೇಳಿ ಅರ್ಜಿ ಗಳನ್ನು ತಿರಸ್ಕರಿಸಬೇಡಿ ಎಂದು ಅಧಿಕಾರಿಗಳ ಜತೆಗೆ ಸಭೆ ನಡೆ ಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು ಮಾಡಿದರು.
ಮಕ್ಕಳು ತೆರಿಗೆ ಪಾವತಿದಾರರಾಗಿ ದ್ದರೆ ಆ ಕುಟುಂಬಕ್ಕೆ ಯೋಜನೆ ಇಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್ ಹೇಳಿಕೆ ನೀಡಿದ್ದಾರೆ. ಇದ ರಿಂದಾಗಿ ಗೃಹಲಕ್ಷ್ಮೀ ಯೋಜನೆ ಯಲ್ಲಿ ಮತ್ತೂಂದು ಗೊಂದಲ ಮೂಡಿದೆ. ಸರಕಾರಿ ನೌಕರರು ತೆರಿಗೆ ಪಾವ ತಿಸುತ್ತಾರೆ. ಹೀಗಾಗಿ ಅವರಿಗೆ ಯೋಜನೆ ಅನ್ವಯವಾಗುವುದಿಲ್ಲ. ಎಪಿಎಲ್ ಕಾರ್ಡ್‌ದಾರರ ಪೈಕಿ 11 ಲಕ್ಷ ಜನರು ತೆರಿಗೆದಾರರಾಗಿದ್ದಾರೆ. ಮುಂದಿನ ದಿನಗಳಲ್ಲಿ ಎಪಿಎಲ್ ಕಾರ್ಡ್‌ದಾರರೂ ಯೋಜನೆ ವ್ಯಾಪ್ತಿಗೆ ಬರುವಂತೆ ನಿಯಮ ರೂಪಿಸ ಲಾಗುವುದು. ಶೇ. 85ರಿಂದ ಶೇ. 88ರಷ್ಟು ಮಹಿಳೆಯರಿಗೆ ಈ ಯೋಜನೆ ತಲುಪಲಿದೆ ಎಂದು ಹೆಬ್ಟಾಳ್ಕರ್ ವಿವರಿಸಿದರು.
Related Articles
Advertisement