Advertisement
20 ಕಿ.ಮೀ. ನಡಿಗೆ ದಾಖಲೆ20 ಕಿ.ಮೀ. ವೇಗದ ನಡಿಗೆಯಲ್ಲಿ ಮಂಗಳೂರು ವಿ.ವಿ. ವ್ಯಾಪ್ತಿಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಜುನೇದ್ ಕೆ.ಟಿ. ಹೊಸ ಕೂಟ ದಾಖಲೆ ಮಾಡಿದ್ದಾರೆ. 1 ಗಂಟೆ, 26 ನಿಮಿಷ, 39.78 ಸೆಕೆಂಡ್‌ನಲ್ಲಿ 20 ಕಿ.ಮೀ. ಕ್ರಮಿಸಿದ ಜುನೇದ್ ರಾಯ್‌ಪುರ್‌ನ ಆರ್‌ಎಸ್‌ಎಸ್ ವಿ.ವಿ. ಬಿ. ಕುಮಾರ್ ಪಿಟಿ (1ಗಂ. 29ನಿ. 8.00 ಸೆ.) ಹೆಸರಲ್ಲಿದ್ದ ಹಿಂದಿನ ದಾಖಲೆಯನ್ನು ಮುರಿದರು.
ಮಹಿಳೆಯರ ಉದ್ದ ಜಿಗಿತದಲ್ಲಿ ಮದ್ರಾಸ್ ವಿ.ವಿ.ಯ ಎ. ಶೆರಿನ್ 6.32 ಮೀ. ಜಿಗಿತದೊಂದಿಗೆ ಕೂಟ ದಾಖಲೆ ನಿರ್ಮಿಸಿದರು. ಹಿಂದಿನ ದಾಖಲೆ ಕಣ್ಣೂರು ವಿ.ವಿ.ಯ ಮಯೂಖ ಜೋನಿ (6.28 ಮೀ.) ಹೆಸರಲ್ಲಿತ್ತು. ಎರಡನೇ ದಿನದ ವೈಶಿಷ್ಟ್ಯ
20 ಕಿ.ಮೀ. ನಡಿಗೆ ಸ್ಪರ್ಧೆಯೊಂದಿಗೆ ಪ್ರಾರಂಭವಾದ ಕೂಟದ 2ನೇ ದಿನ ಒಟ್ಟು 11 ಫೆ„ನಲ್ ಸ್ಪರ್ಧೆಗಳನ್ನು ಕಂಡಿತು. ಇದರಲ್ಲಿ ಅತೀ ವೇಗದ ಓಟಗಾರರನ್ನು ನಿರ್ಧರಿಸುವ ಪುರುಷ ಹಾಗೂ ಮಹಿಳೆಯರ ವಿಭಾಗದ 100 ಮೀಟರ್ ಸ್ಪರ್ಧೆ ಗಮನಾರ್ಹವಾಗಿತ್ತು. ಇದರೊಂದಿಗೆ ಪುರುಷರು ಹಾಗೂ ಮಹಿಳೆಯರ ವಿಭಾಗಗಳ 400 ಮೀ. ಹರ್ಡಲ್ಸ್, 800 ಮೀ. ಓಟ, ಲಾಂಗ್ ಜಂಪ್, ಡಿಸ್ಕಸ್ ತ್ರೋ, ಹೈಜಂಪ್ ಹಾಗೂ ಹ್ಯಾಮರ್ ತ್ರೋ ಸ್ಪರ್ಧೆಗಳ ಅಂತಿಮ ಸುತ್ತಿನ ಸ್ಪರ್ಧೆಗಳು ನಡೆದವು.
Related Articles
ಹೈಜಂಪ್‌ನ ಕೊನೆಯ ಸುತ್ತು ರೋಚಕ ಹಣಾಹಣಿಗೆ ಸಾಕ್ಷಿಯಾಯಿತು. ಮಂಗಳೂರು ವಿ.ವಿ.ಯ ಆರೋಮಲ್ ಹಾಗೂ ಹರ್ಯಾಣದ ಬಾಗ್ವಾರ ವಿ.ವಿ.ಯ ಗುರ್ಜಿತ್ ಸಿಂಗ್ ನಡುವೆ ಟೈ (2.14 ಮೀ.) ಆಯಿತು. ಕೊನೆಯ ಹಂತದಲ್ಲಿ 2.17 ಮೀ. ಜಿಗಿತದೊಂದಿಗೆ ಗುರ್ಜಿತ್ ಸಿಂಗ್ ಮೊದಲ ಸ್ಥಾನಿಯಾದರು. ಆರೋಮಲ್ ಫೌಲ್ ಮಾಡಿ ನಿರಾಶೆ ಅನುಭವಿಸಿದರು.
Advertisement
ಮುಂಚೂಣಿಯಲ್ಲಿ ಮಂಗಳೂರು ವಿ.ವಿ.ಎರಡನೇ ದಿನದ ಅಂತ್ಯಕ್ಕೆ ಮಂಗಳೂರು ವಿ.ವಿ. 4 ಚಿನ್ನದ ಪದಕ, 4 ರಜತ ಹಾಗೂ 2 ಕಂಚಿನ ಪದಕದೊಂದಿಗೆ ಕೂಟದ ಅಗ್ರಸ್ಥಾನ ಕಾಯ್ದುಕೊಂಡಿದೆ. ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಾದ ಜುನೇದ್ ಕೆ.ಟಿ. 20 ಕಿ.ಮೀ. ನಡಿಗೆಯಲ್ಲಿ, 800 ಮೀ. ಓಟದಲ್ಲಿ ಸುನಿಲಾ ಕುಮಾರಿ, ಹ್ಯಾಮರ್ ತ್ರೋನಲ್ಲಿ ಪ್ರದೀಪ್ ಕುಮಾರ್ ಚಿನ್ನದ ಪದಕ ಪಡೆದರು. 20 ಕಿ.ಮೀ. ನಡಿಗೆಯಲ್ಲಿ ನವೀನ್, 100 ಮೀ. ಓಟದಲ್ಲಿ ಎಸ್. ಧನಲಕ್ಷ್ಮೀ, ಉದ್ದ ಜಿಗಿತದಲ್ಲಿ ಐಶ್ವರ್ಯಾ, ಹೆ„ಜಂಪ್‌ನಲ್ಲಿ ಆರೋಮಲ್ ರಜತ ಪದಕ, 800 ಮೀ.ಓಟದಲ್ಲಿ ಮುಜಾಮಿಲ್ ಎ., ಚಕ್ರ ಎಸೆತದಲ್ಲಿ ನಿರಾಣಿ ಕಂಚಿನ ಪದಕ ಗೆದ್ದಿದ್ದಾರೆ. ಫಲಿತಾಂಶಗಳ ವಿವರ
20 ಕಿ.ಮೀ. ನಡಿಗೆ (ಪುರುಷರ ವಿಭಾಗ)
1. ಜುನೇದ್ ಕೆ.ಟಿ., ಮಂಗಳೂರು ವಿ.ವಿ. (1 ಗಂ., 26 ನಿ., 39.78 ಸೆ., ನೂತನ ಕೂಟ ದಾಖಲೆ, ಆಳ್ವಾಸ್)
2. ನವೀನ್, 1 ಗಂ. 26 ನಿ., 53.56 ಸೆ. (ಮಂಗಳೂರು ವಿ.ವಿ.)
3. ರಾಹುಲ್, 1 ಗಂ., 28 ನಿ., 12.30 ಸೆ. (ದೆಹಲಿ ವಿ.ವಿ.)
400 ಮೀ. ಹರ್ಡಲ್ಸ್ (ಪುರುಷರ ವಿಭಾಗ)
1. ಧವಲ್ ಮಹೇಶ್ ಉಠೇಕರ್ (51.300ಸೆ.), ಸರ್ದಾರ್ ಪಟೇಲ್ ವಿ.ವಿ.
2. ಡಿ. ಅಮರನಾಥ್ ( 51.871 ಸೆ.), ರಾಣಿ ಚೆನ್ನಮ್ಮ ವಿ.ವಿ.
3. ನಾರಾಯಣ್ ಯಾದವ್ (51.950 ಸೆ.), ಡಾ| ಆರ್‌ಎಮ್‌ಎಲ್ ವಿ.ವಿ.
400 ಮೀ. ಹರ್ಡಲ್ಸ್ (ಮಹಿಳೆಯರ ವಿಭಾಗ)
1. ಪ್ರೀತಿ (59.910 ಸೆ.), ವಿಬಿಎಸ್‌ಪಿ ವಿ.ವಿ. , ಜೌನ್‌ಪುರ್
2. ಪ್ರಿಯಾರ್ ವಿವಿಸ್ವ, ( 59.987 ಸೆ.), ಎಸ್‌ಆರ್‌ಎಮ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ
3. ನನಿØ , ( 1 ನಿ., 00.319 ಸೆ ), ಮಹರ್ಷಿ ದಯಾನಂದ ವಿ.ವಿ.
100 ಮೀ. ಓಟ (ಪುರುಷರ ವಿಭಾಗ)
1. ನರೇಶ್ ಕುಮಾರ್, (10.570ಸೆ ), ಆಚಾರ್ಯ ನಾಗಾರ್ಜುನ ವಿ.ವಿ.
2. ಜಿ. ಕಾತಿರವನ್, (10.612 ಸೆ. ), ಭಾರತಿದಾಸನ್ ವಿ.ವಿ.
3. ಓಂಕಾರ್‌ನಾಥ್, (10.653 ಸೆ.), ಮಹಾತ್ಮಾಗಾಂ ಧಿ ವಿ.ವಿ., ಕೊಟ್ಟಾಯಂ
100 ಮೀ. ಓಟ (ಮಹಿಳೆಯರ ವಿಭಾಗ)
1. ಜ್ಯೋತಿ ವೈ., (11.642 ಸೆ.), ಆಚಾರ್ಯ ನಾಗಾರ್ಜುನ ವಿ.ವಿ.
2. ಎಸ್. ಧನಲಕ್ಷ್ಮೀ, ( 11.683 ಸೆ.), ಮಂಗಳೂರು ವಿ.ವಿ.
3. ಕೌರ್ ಅಮƒತ್, (11.873 ಸೆ.), ಪಂಜಾಬ್ ವಿ.ವಿ., ಪಟಿಯಾಲ
800 ಮೀ. ಓಟ (ಪುರುಷರ ವಿಭಾಗ)
1. ಅಮನ್‌ದೀಪ್, (1 ನಿ., 54.094 ಸೆ.), ಮಹರ್ಷಿ ದಯಾನಂದ ವಿ.ವಿ.
2. ಶರ್ಮ ಗೌರವ್, (1ನಿ., 54.363 ಸೆ.), ಜಿವಾಜಿ ವಿ.ವಿ.
3. ಮುಜಾಮಿಲ್ ಎ., (1ನಿ., 54.42 ಸೆ.), ಮಂಗಳೂರು ವಿ.ವಿ.
800 ಮೀ. ಓಟ (ಮಹಿಳೆಯರ ವಿಭಾಗ)
1. ಸುನಿಲಾ ಕುಮಾರಿ, (2 ನಿ., 07.97 ಸೆ.), ಮಂಗಳೂರು ವಿ.ವಿ.
2. ಯಮುನಾ, ( 2 ನಿ., 08.25 ಸೆ.), ಸಾವಿತ್ರಿ ಬಾಯಿ ಫುಲೆ ವಿ.ವಿ.
3. ಅಲೀಶ (2 ನಿ. 08.05 ಸೆ.), ಮಹಾತ್ಮಾ ಗಾಂ ಧಿ ವಿ.ವಿ., ಕೊಟ್ಟಾಯಂ.