Advertisement

ದಿಲ್ಲಿಯಲ್ಲಿ ಎಲ್‌ಪಿಜಿ ಬ್ಲಾಸ್ಟ್‌: ಇಬ್ಬರು ಅಗ್ನಿಶಾಮಕ ಸಿಬಂದಿ ಸಾವು

11:43 AM Feb 24, 2017 | udayavani editorial |

ಹೊಸದಿಲ್ಲಿ : ಪಶ್ಚಿಮ ದಿಲ್ಲಿಯ ವಿಕಾಸ್‌ಪುರಿಯ ಅಂಗಡಿಯೊಂದರಲ್ಲಿ ಸಂಭವಿಸಿದ ಎಲ್‌ಪಿಜಿ ಸಿಲಿಂಡರ್‌ ಬ್ಲಾಸ್ಟ್‌ನಿಂದ ಉಂಟಾದ ಭಾರೀ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ಅಗ್ನಿಶಾಮಕ ದಳದ ಇಬ್ಬರು ಸಿಬಂದಿಗಳು ದಾರುಣವಾಗಿ ಮೃತಪಟ್ಟಿರುವುದು ವರದಿಯಾಗಿದೆ.

Advertisement

ಇಂದು ನಸುಕಿನ 5.35ರ ಹೊತ್ತಿಗೆ ಅಂಗಡಿಯೊಂದರಲ್ಲಿ ಎಲ್‌ಪಿಜಿ ಸಿಲಿಂಡರ್‌ ಬ್ಲಾಸ್ಟ್‌ ಆಗಿತ್ತು. ಸುದ್ದಿ ತಿಳಿದ ಅಗ್ನಿಶಾಮಕ ದಳ ಒಡನೆಯೇ ಅಲ್ಲಿಗೆ ಧಾವಿಸಿತ್ತು. ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದವರ ಪೈಕಿ ಇಬ್ಬರು ಅಗ್ನಿ ಶಾಮಕ ದಳದ ಹರಿ ಸಿಂಗ್‌ ಮೀಣ ಮತ್ತು ಹರಿ ಓಂ ಎಂಬವರು ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಸುಟ್ಟು ಕರಕಲಾದರು. 

ಇನ್ನಿಬ್ಬರು ಅಗ್ನಿ ಶಾಮಕದಳದ ಸಿಬಂದಿಗಳಾದ ನವೀನ್‌ ಮತ್ತು ರವೀಂದರ್‌ ಎಂಬವರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು ಅವರನ್ನು ಬಿ ಎಲ್‌ ಕಪೂರ್‌ ಆಸ್ಪತ್ರೆಗೆ ಸೇರಿಸಲಾಗಿದೆ. ಇವರ ಸ್ಥಿತಿ ಚಿಂತಾಜನಕವಿದೆ ಎಂದು ತಿಳಿದು ಬಂದಿದೆ. 

ಬೆಳಗ್ಗೆ 5.30ರ ಹೊತ್ತಿಗೆ ವಿಕಾಸ್‌ಪುರಿಯ ಲಾಲ್‌ ಮಾರ್ಕೇಟ್‌ನ ಎಚ್‌ ಬ್ಲಾಕ್‌ನಲ್ಲಿರುವ 10 ಅಡಿ x 10 ಅಡಿ ಸ್ಥಳಾವಕಾಶದ ಸಣ್ಣ ಅಂಗಡಿಯೊಂದರಲ್ಲಿ ಗ್ಯಾಸ್‌ ಸಿಲಿಂಡರ್‌ ಸ್ಫೋಟ ಸಂಭವಿಸಿತ್ತು. ಆದರೆ ಇದಕ್ಕೆ ಕಾರಣವೇನು ಎಂಬುದು ಇನ್ನಷ್ಟೇ ಗೊತ್ತಾಗಬೇಕಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next