Advertisement

Jammu Kashmir: 24 ಗಂಟೆಗಳಲ್ಲಿ 2 ಎನ್‌ ಕೌಂಟರ್- ಓರ್ವ ಉಗ್ರ ಸಾವು, ಯೋಧ ಹುತಾತ್ಮ

11:48 AM Jul 24, 2024 | Team Udayavani |

ಜಮ್ಮು-ಕಾಶ್ಮೀರ: ಶೋಧ ಕಾರ್ಯಾಚರಣೆ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ನಡೆದ ಎನ್‌ ಕೌಂಟರ್‌ ನಲ್ಲಿ ಉಗ್ರನೊಬ್ಬ ಸಾವನ್ನಪ್ಪಿದ್ದು, ಸೈನಿಕರೊಬ್ಬರು ಗಾಯಗೊಂಡಿರುವ ಘಟನೆ ಬುಧವಾರ (ಜುಲೈ 24) ಜಮ್ಮು-ಕಾಶ್ಮೀರದ ಕುಪ್ವಾರದಲ್ಲಿ ನಡೆದಿದೆ. ಇದು ಕಾಶ್ಮೀರದಲ್ಲಿ ಕಳೆದ 24 ಗಂಟೆಗಳಲ್ಲಿ ನಡೆದ 2ನೇ ಎನ್‌ ಕೌಂಟರ್‌ ಘಟನೆಯಾಗಿದೆ.

Advertisement

ಮಂಗಳವಾರ ಪೂಂಚ್‌ ಜಿಲ್ಲೆಯಲ್ಲಿ ಉಗ್ರರ ಒಳನುಸುಳುವಿಕೆಯನ್ನು ಕಾರ್ಯಾಚರಣೆ ನಡೆಸಿ ವಿಫಲಗೊಳಿಸಿದ ಸಂದರ್ಭದಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದರು. ನಂತರ ಸೇನಾಪಡೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿದ್ದರು.

ಕೆಲವು ದಿನಗಳ ಹಿಂದೆ ಕುಪ್ವಾರದ ಕೋವೌಟ್‌ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿದ್ದಾರೆ ಎಂಬ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಲಾಗಿತ್ತು. ಬುಧವಾರ (ಜು.24) ಬೆಳಗ್ಗೆ ಶಂಕಿತರ ಚಲನವಲನ ಗಮನಿಸಿದ ವೇಳೆ, ಶರಣಾಗಲು ಸೂಚಿಸಿದ್ದರು, ಆದರೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಬಳಿಕ ನಡೆದ ಎನ್‌ ಕೌಂಟರ್‌ ನಲ್ಲಿ ಉಗ್ರನೊಬ್ಬನನ್ನು ಹೊಡೆದುರುಳಿಸಲಾಯಿತು ಎಂದು ವರದಿ ತಿಳಿಸಿದೆ.

Advertisement

ಮಂಗಳವಾರ ನಡೆದ ಗುಂಡಿನ ದಾಳಿಯಲ್ಲಿ ಲ್ಯಾನ್ಸ್‌ ನಾಯಕ್‌ ಸುಭಾಶ್‌ ಕುಮಾರ್‌ ಅವರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾದೇ ಸಾವನ್ನಪ್ಪಿದ್ದರು. ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಸೇನೆಗೆ ಹಸ್ತಾಂತರಿಸಲಾಗಿತ್ತು ಎಂದು ವರದಿ ತಿಳಿಸಿದೆ.

ಇದನ್ನೂ ಓದಿ:Hosanagar: ಮುಂಡಳ್ಳಿ ಸಮೀಪ ರಸ್ತೆಗೆ ಬಿದ್ದ ಬೃಹತ್ ಮರ; ಬೆಳಗ್ಗೆ 4 ಗಂಟೆ ಸಂಚಾರ ಬಂದ್

Advertisement

Udayavani is now on Telegram. Click here to join our channel and stay updated with the latest news.

Next