Advertisement

Election: ಜಮ್ಮು- ಕಾಶ್ಮೀರ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕಾರ: ರಾಮ್‌ ಮಾಧವ್‌

08:56 PM Sep 04, 2024 | Team Udayavani |

ಶ್ರೀನಗರ: ಮುಂಬರುವ ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಯು ಐತಿಹಾಸಿಕವಾಗಲಿದ್ದು, ಬಿಜೆಪಿ ನೇತೃತ್ವದಲ್ಲಿ ನೂತನ ಸರ್ಕಾರ ರಚನೆಯಾಗಲಿದೆ ಎಂದು ಬಿಜೆಪಿ ಚುನಾವಣಾ ಉಸ್ತುವಾರಿ ರಾಮ್‌ ಮಾಧವ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಶ್ರೀನಗರದ ಲಾಲ್‌ಚೌಕ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಐಜಾಜ್‌ ಹುಸೇನ್‌ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಭಾಗಿಯಾದ ಬಳಿಕ ಅವರು ಮಾತನಾಡಿದರು.

“34 ವರ್ಷಗಳಿಂದ ಕಣಿವೆ ರಾಜ್ಯದ ದುಸ್ಥಿತಿಗೆ ಕಾರಣವಾಗಿರುವ ರಾಜಕಾರಣಿಗಳ ಕುಟುಂಬಗಳಿಂದ ಜಮ್ಮು-ಕಾಶ್ಮೀರ ಮುಕ್ತಿ ಪಡೆಯಲಿದೆ. ಇಲ್ಲಿ ಹೊಸ ನಾಯಕತ್ವದ ಉದಯವಾಗಲಿದೆ. ನ್ಯಾಷನಲ್‌ ಕಾನ್ಫರೆನ್ಸ್‌ ಮತ್ತು ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿಗಳು ಬಂಡುಕೋರರ ನೆರವಿನೊಂದಿಗೆ ಪ್ರಚಾರ ನಡೆಸುತ್ತಿವೆ ಎಂದು ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next