ಜಮ್ಮು: ಜಮ್ಮು ಏರ್ ಫೋರ್ಸ್ ನ ವಾಯುಪಡೆ ನೆಲೆ ಮೇಳೆ ಕಳೆದ ರಾತ್ರಿ ಉಗ್ರರು ಡ್ರೋನ್ ಮೂಲಕ ಬಾಂಬ್ ದಾಳಿ ನಡೆಸಿದ ಘಟನೆ ಬೆನ್ನಲ್ಲೇ ಸೋಮವಾರವೂ ಜಮ್ಮು ವಾಯುನೆಲೆ ಮೇಲೆ ದಾಳಿ ನಡೆಸಲು ಎರಡು ಡ್ರೋನ್ ಪತ್ತೆಯಾಗಿದ್ದು, ಸೇನಾಪಡೆ ಗುಂಡಿನ ದಾಳಿ ನಡೆಸಿದ ಪರಿಣಾಮ ಅವುಗಳು ವಾಪಸ್ ಹೋಗಿರುವುದಾಗಿ ಅಧಿಕಾರಿಗಳು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಚಂದನವನಕ್ಕೆ ಬಾಲಿವುಡ್ ನಟಿ:ವಿಕ್ರಾಂತ್ ರೋಣನ ಜೊತೆ ಬಿಟೌನ್ ಬೆಡಗಿ ಮಸ್ತ್ ಸ್ಟೆಪ್
ಜೂನ್ 27-28ರ ಮಧ್ಯರಾತ್ರಿ ರತುನ್ ಚುಕ್- ಕಲುಚುಕ್ ಮಿಲಿಟರಿ ಪ್ರದೇಶದಲ್ಲಿ ಎರಡು ಅನುಮಾನಾಸ್ಪದ ಡ್ರೋನ್ ಚಟುವಟಿಕೆಯಲ್ಲಿ
ಇರುವುದನ್ನು ಭಾರತೀಯ ಸೇನೆ ಪತ್ತೆ ಹಚ್ಚಿತ್ತು. ಕೂಡಲೇ ಮುನ್ನೆಚ್ಚರಿಕೆ ವಹಿಸಿದ ಸೇನೆ, ಡ್ರೋನ್ ಗುರಿಯಾಗಿರಿಸಿಕೊಂಡು ಗುಂಡಿನ
ದಾಳಿ ನಡೆಸಿತ್ತು. ಬಳಿಕ ಎರಡೂ ಡ್ರೋನ್ ಗಳು ಕಣ್ಮರೆಯಾಗಿರುವುದಾಗಿ ಪ್ರಕಟಣೆಯಲ್ಲಿ ವಿವರಿಸಿದೆ.
ಸೇನೆಯ ಕ್ರಿಪ್ರ ಕಾರ್ಯಾಚರಣೆ ಪರಿಣಾಮ ಒಂದು ದೊಡ್ಡ ಗಂಡಾಂತರದಿಂದ ಪಾರಾದಂತಾಗಿದೆ. ಡ್ರೋನ್ ಘಟನೆಯ ನಂತರ ಭದ್ರತಾ ಪಡೆಗಳು ಹೈಅಲರ್ಟ್ ಆಗಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿರುವುದಾಗಿ ವರದಿ ಹೇಳಿದೆ.
ಈ ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸೇನಾ ನೆಲೆಯ ಸುತ್ತ ತೀವ್ರ ಶೋಧ ಕಾರ್ಯ ನಡೆಸಲಾಗುತ್ತಿದೆ. ಜಮ್ಮುವಿನ ಸೇನಾ ನೆಲೆಯ ಮೇಲೆ ಡ್ರೋನ್ ಉಪಯೋಗಿಸಿ ಬಾಂಬ್ ದಾಳಿ ನಡೆಸಿದ 24ಗಂಟೆಗಳ ನಂತರ ಮತ್ತೆ ಎರಡು ಡ್ರೋನ್ ಗಳು ಪತ್ತೆಯಾಗಿರುವುದು ಉಗ್ರರ ದಾಳಿ ಹೊಸ ಸ್ವರೂಪ ಪಡೆದುಕೊಂಡಿರುವುದಾಗಿ ವರದಿ ವಿಶ್ಲೇಷಿಸಿದೆ.