Advertisement

ಆಟೋ, ಟ್ಯಾಕ್ಸಿ ಹತ್ತಲೂ 2 ಡೋಸ್‌ ಕಡ್ಡಾಯ?

05:55 PM Dec 27, 2021 | Team Udayavani |

ಬೆಂಗಳೂರು: ಸೋಂಕಿನ ಹಾವಳಿ ಇದೇ ರೀತಿ ಮುಂದುವರಿದರೆ, “ಎರಡು ಡೋಸ್‌ ಲಸಿಕೆ ಕಡ್ಡಾಯ’ ನಿಯಮದ ವ್ಯಾಪ್ತಿಗೆ ಆಟೋ, ಟ್ಯಾಕ್ಸಿಗಳೂ ಒಳಪಡುವ ದಿನಗಳು ದೂರ ಇಲ್ಲ! -ಇಂತಹದ್ದೊಂದು ಚಿಂತನೆ ಈಗಾ ಗಲೇ ಬಿಬಿಎಂಪಿ ಅಧಿಕಾರಿಗಳ ವಲಯದಲ್ಲಿ ನಡೆದಿದೆ.

Advertisement

ಮಾಲ್‌ಗ‌ಳು, ವಾಣಿಜ್ಯ ಸಂಕೀರ್ಣಗಳು ಮತ್ತು ಚಿತ್ರಮಂದಿರಗಳಿಗೆ ಭೇಟಿ ನೀಡುವವರಿಗೆ ಈಗಾ ಗಲೇ ಎರಡು ಡೋಸ್‌ ಕಡ್ಡಾಯಗೊಳಿಸಲಾಗಿದೆ. ಮುಂದು ವರಿದು ಮೆಟ್ರೋ, ಬಸ್‌ನಂತಹ ಸಾರ್ವಜನಿಕ ಸಾರಿಗೆ ಸೇವೆಗಳಲ್ಲೂ ಈ ನಿಯಮ ಜಾರಿಗೊಳಿಸಲು ಬಿಬಿಎಂಪಿ  ಯು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, ಆಟೋ ಮತ್ತು ಟ್ಯಾಕ್ಸಿಗಳಲ್ಲಿ ಪ್ರಯಾಣಿ  ಸುವ ಗ್ರಾಹಕರಿಗೂ ಡಬಲ್‌ ಡೋಸ್‌ ಕಡ್ಡಾಯಗೊಳಿಸುವ ಯೋಚನೆ ನಡೆದಿದೆ.

ಕೊರೊನಾ ರೂಪಾಂತರಿ ಒಮಿಕ್ರಾನ್‌ ಪ್ರಕರಣ ಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಇದರ ನಿಯಂತ್ರಣಕ್ಕೆ ಸದ್ಯಕ್ಕೆ ಇದು ಸಾರ್ವಜನಿಕ ಸ್ಥಳಗಳಲ್ಲಿ ಎರಡೂ ಡೋಸ್‌ ಕಡ್ಡಾಯಗೊಳಿಸಲಾಗಿದೆ. ಆಟೋ ಮತ್ತು ಟ್ಯಾಕ್ಸಿಯಲ್ಲೂ ಇದನ್ನು ಪರಿಚಯಿ ಸುವ ಆಲೋಚನೆ ಇದೆ.

ಮುಂಬರುವ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಸರ್ಕಾರದ ಸೂಚನೆ ಮೇರೆಗೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಬಾಲಸುಂದರ್‌ “ಉದಯವಾಣಿ’ಗೆ ತಿಳಿಸಿದರು. ಮನೆ ಮನೆ ಲಸಿಕೆ, ವಾರಕ್ಕೊಮ್ಮೆ ಅಭಿಯಾನ, ಮಾಲ್‌ಗ‌ಳು ಮತ್ತು ವಾಣಿಜ್ಯ ಸಂಕೀರ್ಣಗಳಲ್ಲಿ ಡಬಲ್‌ ಡೋಸ್‌ ಕಡ್ಡಾಯ, ಆರೋಗ್ಯ ಕಾರ್ಯಕರ್ತರಿಗೆ ಟಾರ್ಗೆಟ್‌ ಸೇರ

Advertisement

Udayavani is now on Telegram. Click here to join our channel and stay updated with the latest news.

Next