Advertisement
ಬುಧವಾರ ಮಧ್ಯಾಹ್ನ 1.15ಕ್ಕೆ ದೀಪಕ್ ರಾವ್ ಕೊಲೆಯಾಗಿದ್ದಾರೆ. ಆದರೆ ಅದಕ್ಕೆ ಎರಡು ದಿನ ಹಿಂದೆಯೇ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಆರೋಪಿಗಳು ವಾಹನದಲ್ಲಿ ಆಯುಧಗಳನ್ನು ಹಿಡಿದು ಕೊಂಡು ಕಾಟಿಪಳ್ಳ, ಕೈಕಂಬ ಪ್ರದೇಶದಲ್ಲಿ ಓಡಾಡುತ್ತಿದ್ದರು ಎಂಬ ವಿಚಾರ ನೌಶಾದ್ ಮತ್ತು ಮಹಮದ್ ಇಶಾìನ್ ವಿಚಾರಣೆಯ ವೇಳೆ ಪೊಲೀಸರಿಗೆ ಗೊತ್ತಾಗಿದೆ.
Related Articles
ದೀಪಕ್ ರಾವ್ ತನ್ನ ಪರಿಸರದಲ್ಲಿ ಹೆಚ್ಚು ಕ್ರಿಯಾಶೀಲವಾಗಿದ್ದು, ನಾನಾ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸುತ್ತಿದ್ದರು. ಅವರ ಚಟುವಟಿಕೆ, ಕ್ರಿಯಾಶೀಲತೆ ದುಷ್ಕರ್ಮಿಗಳ ಕೆಂಗಣ್ಣಿಗೆ ಕಾರಣವಾಗಿತ್ತು. ದೀಪಕ್ ಕೊಲೆಗೆ ಇದೂ ಒಂದು ಕಾರಣ ಎಂಬ ಅಂಶ ಆರೋಪಿಗಳ ವಿಚಾರಣೆ ವೇಳೆ ಬಹಿರಂಗವಾಗಿದೆ.
Advertisement
ಜನ ಜೀವನ ಸಹಜ ಸ್ಥಿತಿಗೆಕಳೆದ 2 ದಿನಗಳಿಂದ ಅಘೋಷಿತ ಬಂದ್‌ನಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದ ಸುರತ್ಕಲ್, ಕಾಟಿಪಳ್ಳ, ಕೃಷ್ಣಾಪುರ ಪ್ರದೇಶ ಗಳಲ್ಲಿ ಶುಕ್ರ ವಾರ ಜನಜೀವನ ಸಾಮಾನ್ಯ ಸ್ಥಿತಿಗೆ ಬಂದಿದೆ. ಪರಿಸ್ಥಿತಿ ಶಾಂತವಾಗಿದ್ದು, ಅಹಿತಕರ ಘಟನೆ ನಡೆದಿಲ್ಲ. ಆದರೆ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡ ದಂತಿದೆ.
ಶುಕ್ರವಾರ ಅಂಗಡಿ ಮುಂಗಟ್ಟುಗಳು ತೆರೆದಿದ್ದು, ಬಸ್ ಸಂಚಾರ ಪುನರಾರಂಭ ಗೊಂಡಿದೆ. ಆದರೆ ಜನರಲ್ಲಿ ಆತಂಕ ದೂರ ವಾಗಿಲ್ಲ. ಸುರತ್ಕಲ್, ಕೃಷ್ಣಾಪುರ, ಕಾಟಿಪಳ್ಳ, ಕೈಕಂಬ, ಸೂರಿಂಜೆ ಮತ್ತಿತರ ಪ್ರದೇಶ ಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತು ಮುಂದುವರಿದಿದೆ.