Advertisement
ನೂತನ ಕಿಂಡಿ ಅಣೆಕಟ್ಟು/ಸೇತುವೆಯು ವಿಟ್ಲಪಟ್ನೂರು ಹಾಗೂ ಕೊಳ್ನಾಡು ಗ್ರಾಮವನ್ನು ಸಂಪರ್ಕಿಸಲಿದ್ದು, ಕೊಡಂಗಾಯಿ ಹೊಳೆಗೆ ಅಡ್ಡಲಾಗಿ ನಿರ್ಮಾಣಗೊಂಡಿದೆ. ವಿಟ್ಲಪಟ್ನೂರು ಗ್ರಾಮದ ಎರ್ಮನಿಲೆ ಪರಿಶಿಷ್ಟ ಜಾತಿ ಕಾಲನಿ ನಿವಾಸಿಗಳ ಅನುಕೂಲದ ದೃಷ್ಟಿಯಿಂದ ಇದು ನಿರ್ಮಾಣಗೊಂಡಿದೆ.
ಎರ್ಮನಿಲೆಯಲ್ಲಿ ನಿರ್ಮಾಣಗೊಂಡಿರುವ ಬ್ರಿಡ್ಜ್ ಕಂ ಬ್ಯಾರೇಜ್ ಸುಮಾರು 45.50 ಮೀ. ಉದ್ದವನ್ನು ಹೊಂದಿದ್ದು, 3 ಮೀ. ಎತ್ತರಕ್ಕೆ ನೀರು ನಿಲ್ಲುವ ಸಾಮರ್ಥ್ಯವನ್ನು ಹೊಂದಿದೆ. ಹೊಳೆಯ ಎರಡೂ ಬದಿಗಳಲ್ಲೂ ಮಣ್ಣು ಕುಸಿಯದಂತೆ ತಡೆಗೋಡೆಯನ್ನೂ ನಿರ್ಮಾಣ ಮಾಡಲಾಗಿದೆ. ಸೇತುವೆಯ ಮೇಲ್ಭಾಗದಲ್ಲಿ 3 ಮೀ. ಅಗಲದ ಸ್ಲಾÂಬ್ ನಿರ್ಮಾಣವಾಗಿದ್ದು, ಲಘು ವಾಹನಗಳು(ಲೈಟ್‌ವೈಟ್ ವೆಹಿಕಲ್) ಮಾತ್ರ ಸಂಚರಿಸಬಹುದಾಗಿದೆ.
Related Articles
Advertisement
ಎರಡೂ ಗ್ರಾಮಗಳ ಕೃಷಿಕರಿಗೆ ಅನುಕೂಲಕೊಳ್ನಾಡು ಗ್ರಾಮದ ಪೇರಪಡು³ ಹಾಗೂ ವಿಟ್ಲಪಟ್ನೂರು ಗ್ರಾಮದ ಎರ್ಮನಿಲೆ ಮಧ್ಯೆ ಈ ಕಿಂಡಿ ಅಣೆಕಟ್ಟು ನಿರ್ಮಾಣಗೊಂಡಿದ್ದು, ಎರಡೂ ಗ್ರಾಮಗಳ ಕೃಷಿಕರಿಗೆ ಅನುಕೂಲ
ವಾಗಲಿದೆ. ನೀರಿನ ನೇರ ಬಳಕೆಗಿಂತಲೂ ಅಂತರ್ಜಲ ವೃದ್ಧಿಯ ಜತೆಗೆ ಹೊಳೆ ಬದಿಯ ತೋಟಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಎರ್ಮನಿಲೆಯಿಂದ ಮೂರ್ಕಾಜೆ ಭಾಗದವರೆಗೆ ಇಲ್ಲಿ ನೀರು ನಿಲ್ಲುವ ಸಾಧ್ಯತೆ ಇದೆ ಎಂದು ಸ್ಥಳೀಯರು ಅಭಿಪ್ರಾಯ ಪಡುತ್ತಾರೆ. ಎಫ್‌ಆರ್‌ಪಿ ತಂತ್ರಜ್ಞಾನ
ಹಿಂದೆ ಸಾಮಾನ್ಯವಾಗಿ ಕಿಂಡಿ ಅಣೆಕಟ್ಟುಗಳಿಗೆ ಕಿರಾಲ್ ಬೋಗಿ ಮರಗಳ ಹಲಗೆಗಳನ್ನು ಹಾಕಿ ನೀರನ್ನು ತಡೆಯಲಾಗುತ್ತಿತ್ತು. ಆದರೆ ಅದಕ್ಕೆ ಬಾಳಿಕೆ ಕಡಿಮೆ. ಹೀಗಾಗಿ ಪ್ರಸ್ತುತ ನಿರ್ಮಾಣವಾಗುತ್ತಿರುವ ಕಿಂಡಿ ಅಣೆಕಟ್ಟುಗಳಿಗೆ ಇಲಾಖೆಯು ಪೈಬರ್ ತಂತ್ರಜ್ಞಾನದ ಹಲಗೆ(ಎಫ್‌ಆರ್‌ಪಿ)ಯನ್ನು ಅಳವಡಿಸುತ್ತಿದೆ. ಇದು ನೀರನ್ನು ಸಮರ್ಪಕವಾಗಿ ತಡೆಹಿಡಿಯುವ ಜತೆಗೆ ಹೆಚ್ಚು ಬಾಳಿಕೆ ಬರುವುದರಿಂದ ಎಫ್‌ಆರ್‌ಪಿ ಫ್ಲಾಂಕ್‌ಗಳನ್ನು ಅಳವಡಿಸುತ್ತಿರುವುದಾಗಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಮಳೆಗಾಲದಲ್ಲಿ ಈ ಫೈಬರ್ ಹಲಗೆಗಳನ್ನು ಇಡುವುದಕ್ಕೆ ಇಲಾಖೆಯಿಂದಲೇ ಗೋಡೌನ್ ಕೂಡ ನಿರ್ಮಾಣಗೊಂಡಿದೆ. ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ
ನೀರಿನ ಬಳಕೆ, ಅಂತರ್ಜಲ ವೃದ್ಧಿ ಹಾಗೂ ಹೊಳೆ ದಾಟುವ ಸೇತುವೆಯಾಗಿ ಸುಮಾರು 2 ಕೋ.ರೂ.ವೆಚ್ಚದಲ್ಲಿ ಈ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಗೊಂಡಿದೆ. ಮುಖ್ಯವಾಗಿ ವಿಟ್ಲಪಟ್ನೂರು ಗ್ರಾಮದ ಎರ್ಮನಿಲೆ ಪ.ಜಾ.ಕಾಲನಿಯ ನಿವಾಸಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ಕಿಂಡಿ ಅಣೆಕಟ್ಟು ನಿರ್ಮಾಣಗೊಂಡಿದೆ. ಪ್ರಸ್ತುತ ಹಲಗೆ ಅಳವಡಿಸುವ ಕಾರ್ಯವೂ ನಡೆದಿದೆ.
-ಶಿವಪ್ರಸನ್ನ, ಸಹಾಯಕ ಎಂಜಿನಿಯರ್ ಸಣ್ಣ ನೀರಾವರಿ ಇಲಾಖೆ, ಬಂಟ್ವಾಳ