Advertisement

2 ಕೋಟಿ ವಂಚನೆ: ಮಾಲೀಕ ಪರಾರಿ

03:58 PM Oct 24, 2021 | Team Udayavani |

ಸಕಲೇಶಪುರ: ಗ್ರಾಹಕರು ನೀಡಿದ್ದ ಚಿನ್ನಾಭರಣವನ್ನು ಅಂಗಡಿ ಮಾಲೀಕನೇ ದೋಚಿಕೊಂಡು ಪರಾರಿಯಾಗಿರುವ ಆರೋಪ ತಾಲೂಕಿನ ಬಾಳ್ಳುಪೇಟೆ ಸಾರ್ವಜನಿಕರಿಂದ ಕೇಳಿ ಬಂದಿದೆ. 5 ವರ್ಷಗಳ ಹಿಂದೆ ರಾಜಸ್ಥಾನ ಮೂಲದ ಹಿತೇಶ್‌ ಎಂಬುವವನು ತಾಲೂಕಿನ ಬಾಳ್ಳುಪೇಟೆ ಗ್ರಾಮದ ಬಿ.ಎಂ ರಸ್ತೆಯಲ್ಲಿ ರಾಮದೇವ್‌ ಜುವೆಲರ್ಸ್‌ ಮತ್ತು ಬ್ಯಾಂಕರ್ ಎಂಬ ಹೆಸರಿನಲ್ಲಿ ಅಂಗಡಿಯೊಂದನ್ನು ತೆರೆದು ಊರಿನ ಜನರ ವಿಶ್ವಾಸಗಳಿಸಿಕೊಂಡು ಚಿನ್ನಾಭರಣ ಮಾರಾಟ, ಚಿನ್ನವನ್ನು ಅಡವಿಟ್ಟು ಕೊಂಡು ಹಣ ನೀಡುವ ವ್ಯವಹಾರ ನಡೆಸುತ್ತಿದ್ದರು.

Advertisement

ಅನೇಕ ಗ್ರಾಹಕರು ತಮ್ಮ ಕಷ್ಟದ ಸಮಯದಲ್ಲಿ ಚಿನ್ನವನ್ನು ಅಡವಿಟ್ಟು ಹಣವನ್ನು ಪಡೆದುಕೊಂಡಿದ್ದರು. ಇನ್ನು ಕೆಲವು ಗ್ರಾಹಕರು ಪಡೆದ ಸಾಲದ ಹಣವನ್ನು ವಾಪಸ್‌ ಕಟ್ಟಿದ್ದರೂ ಅವರಿಗೂ ಅಡವಿಟ್ಟ ಚಿನ್ನವನ್ನು ನೀಡದೆ ಸತಾಯಿಸುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಗ್ರಾಮವನ್ನು ತೊರೆದಿರುವ ಚಿನ್ನದಂಗಡಿ ಮಾಲೀಕ ತನ್ನ ಸ್ನೇಹಿತರ ಬಳಿಯೂ ಲಕ್ಷಾಂತರ ಹಣ ಪಡೆದು ಅವರಿಗೂ ವಂಚಿಸಿದ್ದಾನೆ.

ಇದನ್ನೂ ಓದಿ:- ರೈಲ್ವೆ ಮಾರ್ಗ ಪದೇ ಪದೇ ಬದಲಿಗೆ ಆಕ್ರೋಶ

 2 ಕೋಟಿಗೂ ಹೆಚ್ಚು ಹಣ ಲೂಟಿ ಮಾಡಿದ್ದಾನೆಂಬ ಆರೋಪವಿದ್ದು, ಈತ ಗ್ರಾಮದಲ್ಲಿದ್ದ ಮನೆ ಹಾಗೂ ಅಂಗಡಿಯನ್ನು ಖಾಲಿ ಮಾಡಿಕೊಂಡು ಪರಾರಿಯಾಗಿ ಸುಮಾರು 8-10 ತಿಂಗಳಾಗುತ್ತ ಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ರಾಜಸ್ಥಾನಕ್ಕೆ ಹೋಗಿದ್ದಾನೆಂದು ತಿಳಿದಿದ್ದ ಗ್ರಾಹಕರು ಆತ ಇಂದು ಬರುತ್ತಾನೆ ನಾಳೆ ಬರುತ್ತಾನೆಂದು ಸುಮಾರು 8 ತಿಂಗಳುಗಳಿಂದ ಕಾಯುತ್ತಿದ್ದು, ಈಗ ಹಣ ಕಳೆದುಕೊಂಡವರು ಒಟ್ಟಾಗಿ ಈತನ ವಿರುದ್ಧ ದೂರು ನೀಡಲು ಸಿದ್ಧತೆ ನಡೆಸಿದ್ದಾರೆ. “ಮೊದಲು ವಂಚನೆಗೊಳಗಾಗಿರುವ ಗ್ರಾಹಕರು ಠಾಣೆಗೆ ಬಂದು ದೂರು ನೀಡಲಿ. ನಂತರ ವಂಚಿಸಿರುವ ಚಿನ್ನದಂಗಡಿ ಮಾಲೀಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಗ್ರಾಹಕರು ವ್ಯಾಪಾರ ವಹಿವಾಟು ನಡೆಸುವಾಗ ಮಾಲೀಕನ ಪೂರ್ವಪರ ತಿಳಿದು ವ್ಯವಹಾರ ನಡೆಸಿದರೆ ವಂಚನೆಗೊಳಗಾಗುವುದನ್ನು ತಪ್ಪಿಸಬಹುದು.” ­­ – ಅನಿಲ್‌ ಕುಮಾರ್‌ಡಿ.ವೈ.ಎಸ್‌.ಪಿ ಸಕಲೇಶಪುರ ಉಪವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next