Advertisement

ರಂಗಮಂದಿರ ನಿರ್ಮಾಣಕ್ಕೆ 2 ಕೋಟಿ ರೂ. ಅನುದಾನ

01:44 PM Sep 01, 2019 | Suhan S |

ರಾಮನಗರ: ಜಿಲ್ಲಾ ಕೇಂದ್ರದಲ್ಲಿ ವ್ಯವಸ್ಥಿತ ರಂಗಮಂದಿರ ನಿರ್ಮಾಣಕ್ಕೆ ಅನುಕೂಲವಾಗುವಂತೆ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಿಂದ 2 ಕೋಟಿ ರೂ., ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಎಂಎಲ್ಸಿ ಸಿ.ಎಂ ಲಿಂಗಪ್ಪ ತಿಳಿಸಿದರು.

Advertisement

ನಗರದ ಅರ್ಚಕರಹಳ್ಳಿಯ ಪ್ರಕಾಶ್‌ ಚಂದ್ರ ಕಾಂಪ್ಲೆಕ್ಸ್‌ನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕೃಷ್ಣಾಪುರದೊಡ್ಡಿಯ ಕೆ.ಎಸ್‌. ಮುದ್ದಪ್ಪ ಸ್ಮಾರಕ ಟ್ರಸ್ಟ್‌ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ರಂಗಗೀತೆ ಗಾಯನ ಸ್ಪರ್ಧೆಯ ಸಮಾರೋಪದಲ್ಲಿ ಅವರು ಮಾತನಾಡಿ, ಕನ್ನಡ ರಂಗಭೂಮಿ ಉಳಿವು ಇಂದಿನ ಯುವ ಪೀಳಿಗೆಯ ಕೈಯಲ್ಲಿದೆ. ರಾಮನಗರ ಜಿಲ್ಲೆಯಲ್ಲಿ ಪ್ರತಿವರ್ಷ ಕನಿಷ್ಠ ನಲವತ್ತು ಐವತ್ತು ಸಂಘ- ಸಂಸ್ಥೆಗಳು ಪೌರಾಣಿಕ ನಾಟಕಗಳನ್ನು ಪ್ರದರ್ಶಿಸು ತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಶ್ಲಾಘಿಸಿದರು.

ಕಲಾವಿದರಿಗೆ ತರಬೇತಿ ನೀಡಿ: ಕೆ.ಎಸ್‌.ಎಂ. ಟ್ರಸ್ಟ್‌ ಕಾರ್ಯದರ್ಶಿ ಡಾ.ಎಂ.ಭೈರೇಗೌಡ ಮಾತನಾಡಿ, ರಾಮನಗರ ಜಿಲ್ಲೆಯಲ್ಲಿ ಅಪರೂಪದ ಕಲಾವಿದರಿ ದ್ದಾರೆ. ಗಾಯನ ಕಲಾವಿದರಿಗೆ ಇನ್ನಷ್ಟು ತರಬೇತಿ ನೀಡಿ, ಧ್ವನಿ ಮುದ್ರಿಸಿ ಸಂರಕ್ಷಿಸಬೇಕಾಗಿದೆ ಎಂದು ಸಲಹೆ ನೀಡಿದರು.

ತೀರ್ಪುಗಾರರು: ತಾಲೂಕು ಕ.ಸಾ.ಪ. ಕೋಶಾಧ್ಯಕ್ಷ ರಾಜೇಶ್‌, ಕೈಲಾಂಚ ಹೋಬಳಿ ಘಟಕದ ಅಧ್ಯಕ್ಷ ಗಿರೀಶ್‌ ವಡ್ರಳ್ಳಿ, ನಗರ ಘಟಕದ ಅಧ್ಯಕ್ಷ ಡೇರಿ ವೆಂಕಟೇಶ್‌, ಬಿಡದಿ ಹೋಬಳಿ ಘಟಕದ ಅಧ್ಯಕ್ಷ ಯೋಗಾನಂದ್‌, ಕೂಟಗಲ್ ಹೋಬಳಿ ಘಟಕದ ಅಧ್ಯಕ್ಷ ಚಿನ್ನಗಿರಿಗೌಡ, ಪ್ರಭಾಕರ್‌, ಸಂಚಾಲಕ ಕಿರಣ್‌, ನಂಜುಂಡಿ, ರಾಜೇಶ್‌ ಭಾಗವಹಿಸಿದ್ದರು. ರಂಗಕರ್ಮಿ ಚನ್ನಕೇಶವಮೂರ್ತಿ ಎಂ., ಸಂಗೀತ ನಿರ್ದೇಶಕ ಕಾರ್ತಿಕ್‌ ಪಾಂಡವಪುರ ತೀರ್ಪುಗಾರರಾಗಿದ್ದರು.

ಸ್ಪರ್ಧೆಯ ವಿಜೇತರು:ಚನ್ನಪಟ್ಟಣ ತಾಲೂಕಿನ ಸರ್ವೋತ್ತಮ ಪ್ರಥಮ ಸ್ಥಾನ ಪಡೆದು ಐದು ಸಾವಿರ ನಗದು ಬಹುಮಾನ ಪ್ರಶಸ್ತಿ ಪತ್ರ ಪಡೆದರು. ದಶವಾರದ ಶಿವಲಿಂಗಯ್ಯ ದ್ವಿತೀಯ ಸ್ಥಾನ ಪಡೆದರೆ, ರಾಮನಗರದ ಪ್ರಕಾಶ್‌ ಅರೆಹಳ್ಳಿ ತೃತೀಯ ಸ್ಥಾನ ತಮ್ಮದಾಗಿಸಿಕೊಂಡರು.

Advertisement

ಕೊರಟಗೆರೆಯ ನರಸಿಂಹಯ್ಯ ಹಾಗೂ ಅನಂತನಾಗ್‌ ವಿಶೇಷ ಬಹುಮಾನಗಳನ್ನು ಪಡೆದರು. ಉಳಿದಂತೆ ವರಲಕ್ಷ್ಮೀ, ರತ್ನಮ್ಮ, ನಟರಾಜ್‌, ಮುರಳೀಧರ, ಸಿ.ಪಿ. ಪ್ರಕಾಶ್‌, ರವಿಕುಮಾರ್‌ ಅರೆಹಳ್ಳಿ ಹಾಗೂ ನಾರಾಯಣ್‌ ಸಮಾಧಾನಕರ ಬಹುಮಾನ ಪಡದುಕೊಂಡರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಟಿ. ದಿನೇಶ್‌ ಬಿಳಗುಂಬ ಪ್ರಾಸ್ತಾವಿಕ ಭಾಷಣ ಮಾಡಿದರು. ರಾಮನಗರ ತಾಲೂಕು ಪಂಚಾಯ್ತಿ ಅಧ್ಯಕ್ಷ ಗಾಣಕಲ್ ನಟರಾಜ್‌, ಸಮಾಜ ಸೇವಕ ದೊರೆಸ್ವಾಮಿ, ರಾಮನಗರ ಜಿಲ್ಲಾ ಕಸಾಪ ಕೋಶಾಧ್ಯಕ್ಷ ಎಚ್.ಪಿ.ನಂಜೇಗೌಡ, ಜಯಕರ್ನಾಟ ತಾಲೂಕು ಅಧ್ಯಕ್ಷ ಅರುಣ್‌ ಕುಮಾರ್‌, ಸಮಾಜ ಸೇವಕ ಗುರುಪ್ರಸಾದ್‌, ಸ್ಪಂದನ ಚಾರಿಟೇಬಲ್ ಟ್ರಸ್ಟ್‌ ಅಧ್ಯಕ್ಷ ಮುತ್ತಣ್ಣ, ರಂಗಭೂಮಿ ನಿರ್ದೇಶಕ ಕೃಷ್ಣರಾಜ್‌ ಶಿವಾನಂದಮೂರ್ತಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next