Advertisement
ಕೊಪ್ಪ ತಾಲೂಕಿ ಬರಕನಕಟ್ಟದಲ್ಲಿ ಆರಂಭವಾದ ಸೇವಾ ಅಭಿಯಾನವು 12 ವರ್ಷಗಳಲ್ಲಿ ಉಡುಪಿ ಸಹಿತ ಚಿಕ್ಕಮಗಳೂರು, ದ.ಕ., ಶಿವಮೊಗ್ಗ ಜಿಲ್ಲೆಗಳ ನೂರಾರು ಹಳ್ಳಿಗಳನ್ನು ತಲುಪಿದೆ. ಈವರೆಗೆ 2 ಕೋ.ರೂ. ವ್ಯಯ ಮಾಡಲಾಗಿದೆ. 500ಕ್ಕೂ ಅ ಧಿಕ ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಸಹಾಯ ಮಾಡಲಾಗಿದೆ. ಸಾವಿರಕ್ಕೂ ಮಿಕ್ಕಿ ಮನೆಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ. ಅನೇಕ ಹಳ್ಳಿಗಳಿಗೆ ಐದಾರು ಕಿ.ಮೀ. ದೂರದಿಂದ ವಿದ್ಯುತ್ ಲೇನ್ ಹಾಕಲಾಗಿದೆ. ಸೊದ್ಯೋಗಕ್ಕೆ ಕಾಯಿನ್ ಫೋನ್, ವಿಲ್ ಫೋನ್, ಮೊಬೈಲ್ ಫೋನ್, ಹೊಲಿಗೆ ಯಂತ್ರ ನೀಡಲಾಗಿದೆ. ಕುಡಿಯುವ ನೀರಿನ ಯೋಜನೆ ಜಾರಿ ಮಾಡಲಾಗಿದೆ. ಗಿರಿಜನರಿಗೆ ಭತ್ತದ ಗದ್ದೆಗಳನ್ನು ಕೊಂಡು ನೀಡಲಾಗಿದೆ. ನೀರಾವರಿ ಸೌಲಭ್ಯ, ವಸತಿ ರಹಿತರಿಗೆ ಮನೆ ನಿರ್ಮಿಸಲಾಗಿದೆ ಎಂದರು.
ಮುಂಡುಗಾರು ಗಿರಿಜನರ ಹ್ಯಾಮ್ಲೆಟ್ ಪ್ರದೇಶಕ್ಕೆ ಪೇಜಾವರ ಶ್ರೀಗಳ ನಕ್ಸಲ್ ಪ್ರದೇಶಾಭಿವೃದ್ಧಿ ಯೋಜನೆಯಡಿ ಸುಮಾರು 30ಲ.ರೂ. ವೆಚ್ಚದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿದ್ಯುತ್ ಯೋಜನೆ ಪೂರ್ಣಗೊಂಡಿದೆ. ಈ ಪ್ರದೇಶದ ಸುಮಾರು 35ಕ್ಕೂ ಅಧಿ ಕ ಗಿರಿಜನರ ಮನೆಗಳಿಗೆ ಮೆಸ್ಕಾಂ ವಿದ್ಯುತ್ ಸಂಪರ್ಕ ನೀಡಿದೆ. 2012ರಿಂದ 2018ರ ವರೆಗೆ ಶೃಂಗೇರಿ ತಾಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಗಿರಿಜನರ 156 ಮನೆಗಳಿಗೆ ಪೇಜಾವರ ಮಠದಿಂದ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. ಇದಕ್ಕೆ 35-40 ಲ.ರೂ. ವಿನಿಯೋಗಿಸಲಾಗಿದೆ ಎಂದು ಹೇಳಿದರು.