ಜಮ್ಮು: ದೋಡಾ ಜಿಲ್ಲೆಯಲ್ಲಿ ಸೋಮವಾರ ನಡೆದ ಪ್ರತ್ಯೇಕ ಘಟನೆಗಳಲ್ಲಿ ಎರಡು ಕಾರುಗಳು ಪರ್ವತ ರಸ್ತೆಯಿಂದ ಝರಿಗೆ ಉರುಳಿ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರು ಗಂಟೆಗಳ ಅವಧಿಯಲ್ಲಿ ದೋಡಾ-ಭಾದರ್ವಾಹ್ ರಸ್ತೆಯಲ್ಲಿ ಎರಡು ಅಪಘಾತಗಳು ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ಅಬ್ದುಲ್ ಕಯೂಮ್ ಹೇಳಿದ್ದಾರೆ.
ಬೆಳಗ್ಗೆ 6.30 ರ ಸುಮಾರಿಗೆ ಗಲ್ಗಂಧರ್ ಬಳಿ 400 ಅಡಿ ಕೆಳಗೆ ಕಾರೊಂದು ಉರುಳಿದ ಪರಿಣಾಮವಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದರು ಮತ್ತು ಇನ್ನೊಬ್ಬರಿಗೆ ಗಂಭೀರ ಗಾಯಗಳಾಗಿದ್ದು ನಂತರ ಸಾವನ್ನಪ್ಪಿದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಮೃತರನ್ನು ಶಿವ ಗ್ರಾಮದ ನಿವಾಸಿಗಳಾದ ನಸೀಬ್ ಸಿಂಗ್ (62), ಅವರ ಪತ್ನಿ ಸತ್ಯದೇವಿ (58), ಪುತ್ರ ವಿಕ್ರಮ್ ಸಿಂಗ್ (22), ಲೇಖ್ ರಾಜ್ (63) ಮತ್ತು ಅವರ ಪತ್ನಿ ಸತೀಶಾ ದೇವಿ (60) ಎಂದು ಗುರುತಿಸಲಾಗಿದೆ. ಮದುವೆ ದಿಬ್ಬಣ ಕೂಡಿಕೊಂಡು ಭದೇರ್ವಾಹ್ ಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.
ಎರಡು ಕಿ.ಮೀ ದೂರದಲ್ಲಿರುವ ಮೊಘಲ್ ಮಾರ್ಕೆಟ್ ನಲ್ಲಿ ಶನಿವಾರ ಮಧ್ಯರಾತ್ರಿ 12.30 ರ ಸುಮಾರಿಗೆ ಖಾಸಗಿ ಕಾರು ಸುಮಾರು 300 ಅಡಿ ಎತ್ತರದಿಂದ ಹೊಳೆಗೆ ಬಿದ್ದು ತಂಗೋರ್ನಾ-ಭದರ್ವಾಹ್‌ನ ಸಜಾದ್ ಅಹ್ಮದ್ (38) ಮತ್ತು ಹಿಮೋಟೆ-ಭಾದರ್ವಾಹ್‌ನ ರವೀಂದರ್ ಕುಮಾರ್ (33) ಸಾವನ್ನಪ್ಪಿದ್ದಾರೆ. ಎರಡೂ ಕಡೆ ರಕ್ಷಣಾ ಕಾರ್ಯಾಚರಣೆಗಳನ್ನು ಮಾಡಲಾಗಿದೆ.