ಶ್ರೀನಗರ: ಗುರುವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರದ ಅರ್ನಿಯಾ ಮತ್ತು ಸುಚೇತ್‌ಗಢ್ ಸೆಕ್ಟರ್‌ಗಳಲ್ಲಿ ಅಂತರರಾಷ್ಟ್ರೀಯ ಗಡಿ (ಐಬಿ) ಉದ್ದಕ್ಕೂ ಪಾಕಿಸ್ತಾನದ ರೇಂಜರ್‌ಗಳು ಐದು ಭಾರತೀಯ ಪೋಸ್ಟ್‌ಗಳ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಪ್ರತ್ಯುತ್ತರವನ್ನು ನೀಡಿ ಪಾಕ್ ದಾಳಿಯನ್ನು ಸೆದೆಬಡಿದಿದೆ.
ರಾತ್ರಿ ಸುಮಾರು ಎಂಟು ಗಂಟೆಯ ವೇಳೆಗೆ ಪಾಕ್ ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಗಡಿ ಭದ್ರತಾ ಪಡೆ ಸಿಬ್ಬಂದಿ ಗಾಯಗೊಂಡಿದ್ದು ಓರ್ವನ ಸ್ಥಿತಿ ಗಂಭೀರವಾಗಿದ್ದು ಆತನನ್ನು ವಿಶೇಷ ಚಿಕಿತ್ಸೆಗಾಗಿ ಜಮ್ಮುವಿನ ಜಿಎಂಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿದ ಭದ್ರತಾ ಪಡೆಯ ಅಧಿಕಾರಿ, ಅರ್ನಿಯಾ ಸೆಕ್ಟರ್‌ನಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಪಾಕಿಸ್ತಾನಿ ಪಡೆಗಳ ಗುಂಡಿನ ದಾಳಿ ಪ್ರಾರಂಭವಾಯಿತು, “ಅಪ್ರಚೋದಿತ ಗುಂಡಿನ ದಾಳಿ”ಗೆ ತಕ್ಕ ಪ್ರತಿದಾಳಿ ನಡೆಸಲಾಯಿತು ಎಂದು ಅವರು ಹೇಳಿದರು.
ಇನ್ನು ಸಾಯಿ ಖುರ್ಡ್, ಬುರೆಜಲ್, ಚಕ್ಬುಲ್ಲಾ ಮತ್ತು ದೇವಿಗರ್ ಗ್ರಾಮಗಳ ಸುತ್ತಲೂ ಗುಂಡಿನ ಶಬ್ಧ ಕೇಳಿ ಬಂದಿದ್ದು ಆತಂಕದಲ್ಲಿದ್ದ ಗ್ರಾಮದ ಜನರಿಗೆ ಯೋಧರು ಧೈರ್ಯ ತುಂಬಿದ್ದಾರೆ.
ಇದನ್ನೂ ಓದಿ: Former Chinese Premier: ಚೀನಾದ ಮಾಜಿ ಪ್ರಧಾನಿ ಲಿ ಕೆಕಿಯಾಂಗ್ ಹೃದಯಾಘಾತದಿಂದ ನಿಧನ