Advertisement

ಇಬ್ಬರು ವಿದ್ಯಾರ್ಥಿಗಳ ಖಾತೆಗೆ ಬಂತು 900 ಕೋಟಿ ರೂ.|ಎಟಿಎಂಗಳಿಗೆ ಮುಗಿ ಬಿದ್ದ ಹಳ್ಳಿಗರು

03:31 PM Sep 16, 2021 | Team Udayavani |

ಪಾಟ್ನಾ: ಬಿಹಾರಿನ ಕತಿಹಾರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಚಮತ್ಕಾರ ನಡೆದಿದೆ. ಇಬ್ಬರು ವಿದ್ಯಾರ್ಥಿಗಳ ಬ್ಯಾಂಕ್ ಖಾತಗೆ ಕೋಟ್ಯಂತರ ರೂ. ಹಣ ಜಮಾ ಆಗುವ ಮೂಲಕ ಎಲ್ಲರ ಅಚ್ಚರಿಗೆ ಕಾರಣವಾಗಿದೆ.

Advertisement

6 ನೇ ತರಗತಿಯ ಅನಿಶ್ ಹಾಗೂ ಗುರು ಚರಣ್ ವಿಶ್ವಾಸ ಹೆಸರಿನ ವಿದ್ಯಾರ್ಥಿಗಳು ಗ್ರಾಮೀಣ ಬ್ಯಾಂಕ್‍ನಲ್ಲಿ ಉಳಿತಾಯ ಖಾತೆ ಹೊಂದಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಅನಿಶ್ ಖಾತೆಗೆ 6.2 ಕೋಟಿ ಹಾಗೂ ವಿಶ್ವಾಸನಿಗೆ 900 ಕೋಟಿ ರೂ. ಹಣ ಜಮಾ ಆಗಿದೆ. ಮರು ದಿನ ಪಾಲಕರ ಜೊತೆ ಎಟಿಎಂಗೆ ತೆರಳಿ ಬ್ಯಾಲೆನ್ಸ್ ಚೆಕ್ ಮಾಡಿದಾಗ ಕೋಟ್ಯಂತರ ರೂ.ಇರುವುದನ್ನು ಕಂಡು ಒಂದು ಕ್ಷಣ ದಿಕ್ಕು ತೋಚದಂತಾಗಿದೆ. ಈ ವಿಷಯ ಕಾಡ್ಗಿಚ್ಚಿನಂತೆ ಹರಡಿದ್ದು, ಹಳ್ಳಿಗರೆಲ್ಲರೂ ಎಟಿಎಂ ಕೇಂದ್ರಗಳಿಗೆ ತೆರಳಿ ಬ್ಯಾಲೆನ್ಸ್ ಚೆಕ್ ಮಾಡಿದ್ದಾರೆ. ಆದರೆ, ಕೇವಲ ಇಬ್ಬರು ವಿದ್ಯಾರ್ಥಿಗಳ ಖಾತೆಗೆ ಹಣ ಬಂದಿದೆ ಕಂಡು ನಿರಾಸೆಗೊಂಡಿದ್ದಾರೆ.

ಇನ್ನು ಘಟನೆ ಕುರಿತು ಮಾತನಾಡಿರುವ ಕತಿಹಾರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಉದಯನ್ ಮಿಶ್ರಾ, ವಿದ್ಯಾರ್ಥಿಗಳ ಖಾತೆಗೆ ಕೋಟ್ಯಂತರ ರೂ. ಜಮಾ ಆಗಿರುವ ಸುದ್ದಿ ನಿನ್ನೆ ಸಂಜೆ ನನ್ನ ಗಮನಕ್ಕೆ ಬಂದಿದೆ. ಇದು ಹೇಗೆ ಸಾಧ್ಯವಾಯಿತು ಎಂಬುದನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಈ ಬಗ್ಗೆ ವರದಿ ನೀಡುವಂತೆ ಬ್ಯಾಂಕ್ ಮ್ಯಾನೇಜರ್ ಅವರಿಗೆ ತಿಳಿಸಿದ್ದೇನೆ ಎಂದಿದ್ದಾರೆ.

ಇನ್ನ ಕಳೆದ ಕೆಲ ತಿಂಗಳುಗಳ ಹಿಂದೆ ಈ ರೀತಿಯ ಪ್ರಕರಣವೊಂದು ಬಿಹಾರ್ ನಲ್ಲಿ ನಡೆದಿತ್ತು. ವ್ಯಕ್ತಿಯೊಬ್ಬನ ಖಾತೆಗೆ ಅಚಾತುರ್ಯದಿಂದ 5 ಲಕ್ಷ ರೂ. ಜಮಾ ಆಗಿತ್ತು. ಅದು ಸರ್ಕಾರದಿಂದ ನನ್ನ ಅಕೌಂಟ್‍ಗೆ ಬಂದಿರಬಹುದು. ಹಾಗಾಗಿ ಅದನ್ನು ಹಿಂದಿರುಗಿಸುವುದಿಲ್ಲ ಎಂದು ಆತ ವಾದಿಸಿದ್ದ. ಪರಿಣಾಮ ಆತನನ್ನು ಅದನ್ನು ಹಿಂದಿರುಗಿಸದಿದ್ದಕ್ಕೆ ಆತನನ್ನು ಜೈಲಿಗೆ ಅಟ್ಟಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next