ನವದೆಹಲಿ:ಭಯೋತ್ಪಾದಕರ ಗುಂಡಿನ ದಾಳಿಗೆ ಬಿಹಾರ ಮೂಲದ ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಜಮ್ಮು-ಕಾಶ್ಮೀರದಲ್ಲಿ ಭಾನುವಾರ (ಅಕ್ಟೋಬರ್ 17) ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಭಾರೀ ಮಳೆಗೆ ಹೊಳೆಯಲ್ಲಿ ಕೊಚ್ಚಿಹೋಯ್ತು ಮನೆ; ವಿಡಿಯೋ ವೈರಲ್
ಕುಲ್ಗಾಮ್ ಜಿಲ್ಲೆಯ ವಾನ್ ಪೋಹ್ ಎಂಬಲ್ಲಿ ಉಗ್ರರು ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದು, ಘಟನೆಯಲ್ಲಿ ಮತ್ತೋರ್ವ ಕಾರ್ಮಿಕ ಗಾಯಗೊಂಡಿರುವುದಾಗಿ ವರದಿ ಹೇಳಿದೆ.
ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಪಾನಿ ಪೂರಿ ವ್ಯಾಪಾರ ಮಾಡುತ್ತಿದ್ದ ಬಿಹಾರದ ವ್ಯಕ್ತಿ ಹಾಗೂ ಉತ್ತರಪ್ರದೇಶದ ಬಡಗಿಯೊಬ್ಬನನ್ನು ಗುರಿಯಾಗಿರಿಸಿಕೊಂಡು ಉಗ್ರರು ಹತ್ಯೆಗೈದಿರುವುದಾಗಿ ವರದಿ ತಿಳಿಸಿದೆ.
ಹತ್ಯೆಗೀಡಾದವರನ್ನು ಬಿಹಾರದ ಅರ್ಬಿಂದ್ ಕುಮಾರ್ ಶಾ ಹಾಗೂ ಬಡಗಿ ಸಗೀರ್ ಅಹ್ಮದ್ ಎಂದು ಗುರುತಿಸಲಾಗಿದೆ. ನಾಗರಿಕೆನ್ನು ಗುರಿಯಾಗಿರಿಸಿಕೊಂಡು ಉಗ್ರರು ದಾಳಿ ನಡೆಸುತ್ತಿದ್ದು, ಈವರೆಗೆ 11 ಮಂದಿ ಬಲಿಯಾಗಿದ್ದಾರೆ. ಇದರಲ್ಲಿ ಐವರು ಇತರ ರಾಜ್ಯಕ್ಕೆ ಸೇರಿದವರಾಗಿದ್ದಾರೆ ಎಂದು ವರದಿ ವಿವರಿಸಿದೆ.
ಇತರ ರಾಜ್ಯದವರಿಗೆ ಜಮ್ಮು-ಕಾಶ್ಮೀರದಲ್ಲಿ ವ್ಯಾಪಾರ, ವಹಿವಾಟು ನಡೆಸಲು ಅವಕಾಶ ಇಲ್ಲ ಎಂದು ಸೂಚನೆ ರವಾನಿಸಲು ಹೊರ ರಾಜ್ಯದ ವ್ಯಕ್ತಿಗಳನ್ನು ಗುರಿಯಾಗಿರಿಸಿ ಹತ್ಯೆಗೈಯುತ್ತಿದ್ದಾರೆಂದು ವರದಿ ಹೇಳಿದೆ.
ಕಾಶ್ಮೀರಿ ಪಂಡಿತ್ ಸಮುದಾಯದ ಪ್ರಮುಖ ಸದಸ್ಯ ಮಖಾನ್ ಲಾಲ್ ಬಿಂದ್ರೋ, ಕಾರು ಚಾಲಕ ಮೊಹಮ್ಮದ್ ಶಫಿ ಲೋನ್, ಶಿಕ್ಷಕರಾದ ದೀಪಕ್ ಚಾಂದ್, ಸುಪುನ್ ದರ್ ಕೌರ್ ಮತ್ತು ಬೀದಿ ವ್ಯಾಪಾರಿ ವೀರೇಂದ್ರ ಪಾಸ್ವಾನ್ ಅವರನ್ನು ಉಗ್ರರು ಗುಂಡಿಕ್ಕಿ ಹತ್ಯೆಗೈದಿದ್ದಾರೆ.