Advertisement

Bangladesh: ಭಾರತದಲ್ಲಿರುವ ಬಾಂಗ್ಲಾದೇಶದ ಇಬ್ಬರು ರಾಜತಾಂತ್ರಿಕರು ಕರ್ತವ್ಯದಿಂದ ವಜಾ

01:15 PM Aug 26, 2024 | Team Udayavani |

ಢಾಕಾ/ನವದೆಹಲಿ: ಭಾರತದಲ್ಲಿ ಕರ್ತವ್ಯ ನಿರತರಾಗಿದ್ದ ಬಾಂಗ್ಲಾದೇಶದ ಇಬ್ಬರು ರಾಜತಾಂತ್ರಿಕರನ್ನು ಕರ್ತವ್ಯದಿಂದ ವಜಾಗೊಳಿಸಿ ಬಾಂಗ್ಲಾದೇಶದ ಮಧ್ಯಾಂತರ ಸರ್ಕಾರ ಆದೇಶ ಹೊರಡಿಸಿರುವುದಾಗಿ ವರದಿ ತಿಳಿಸಿದೆ.

Advertisement

ನವದೆಹಲಿಯಲ್ಲಿರುವ ಬಾಂಗ್ಲಾದೇಶ ಹೈ ಕಮಿಷನ್‌ ನಲ್ಲಿ ಮಾಧ್ಯಮ (Press) ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಷಾಬಾನ್‌ ಮಹ್ಮುದ್‌ ಹಾಗೂ ಕೋಲ್ಕತಾದಲ್ಲಿರುವ ಬಾಂಗ್ಲಾದೇಶ ಕಾನ್ಸುಲೇಟ್‌ ನಲ್ಲಿ ಮಾಧ್ಯಮ ಕಾರ್ಯದರ್ಶಿಯಾಗಿದ್ದ ರಂಜನ್‌ ಸೇನ್‌ ಅವರನ್ನು ಕರ್ತವ್ಯದಿಂದ ವಜಾಗೊಳಿಸಿರುವುದಾಗಿ ಬಾಂಗ್ಲಾದೇಶ ಮಧ್ಯಾಂತರ ಸರ್ಕಾರ ಆದೇಶ ಹೊರಡಿಸಿದೆ.

ದೇಶದಲ್ಲಿ ನಡೆದ ಭಾರೀ ಪ್ರತಿಭಟನೆ ನಂತರ ಪ್ರಧಾನಮಂತ್ರಿ ಶೇಕ್‌ ಹಸೀನಾ ಪದಚ್ಯುತಗೊಂಡ ಬಳಿಕ ಹಿಂಸಾಚಾರ ನಡೆದಿತ್ತು. ರಾಜಕೀಯದ ಬೆಳವಣಿಗೆಯಲ್ಲಿ ನೋಬೆಲ್‌ ಪ್ರಶಸ್ತಿ ಪುರಸ್ಕೃತ ಮುಹಮ್ಮದ್‌ ಯೂನೂಸ್‌ ನೇತೃತ್ವದಲ್ಲಿ ಮಧ್ಯಾಂತರ ಸರ್ಕಾರ ರಚನೆಯಾಗಿತ್ತು.

ಷಾಬಾನ್‌ ಮಹ್ಮುದ್‌

Advertisement

ರಾಜಧಾನಿ ಢಾಕಾದಲ್ಲಿ ಲಕ್ಷಾಂತರ ಜನರು ಬೀದಿಗಿಳಿದು ಹಿಂಸಾಚಾರದಲ್ಲಿ ತೊಡಗಿದ ಪರಿಣಾಮ ಆಗಸ್ಟ್‌ 5ರಂದು ಶೇಖ್‌ ಹಸೀನಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ, ಹೆಲಿಕಾಪ್ಟರ್‌ ಮೂಲಕ ಭಾರತಕ್ಕೆ ಪರಾರಿಯಾಗಿದ್ದರು. ಮಾನವ ಹಕ್ಕು ಉಲ್ಲಂಘನೆಯ ಆರೋಪ ಎದುರಿಸುತ್ತಿರುವ ಶೇಖ್‌ ಹಸೀನಾ ಅವರ 15 ವರ್ಷದ ಆಡಳಿತ ಕೊನೆಗೊಂಡಂತಾಗಿದೆ.

ರಂಜನ್‌ ಸೇನ್‌

ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರದಲ್ಲಿ 450ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದು, ಸಾವಿರಾರು ಜನರು ಗಾಯಗೊಂಡಿದ್ದರು. ನಾವು ಎಲ್ಲಾ ನೆರೆಯ ದೇಶಗಳೊಂದಿಗೆ ಸೌಹಾರ್ದ ಸಂಬಂಧ ಮುಂದುವರಿಸುವುದಾಗಿ ಯೂನುಸ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next